ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಇದೀಗ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಮೂವರು ಸರ್ಕಾರಿ ನೌಕರರು ಇರುವುದನ್ನ ಎಸ್ ಐ ಟಿ ತಂಡ ಪತ್ತೆ ಹಚ್ಚಿದೆ. ಆ ಮೂವರನ್ನು ಎಸ್‌ಐಟಿ ತಂಡ ಸಂಪರ್ಕಿಸಿದ್ದು ದೂರು ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಆ ಮೂವರು ದೂರು ನೀಡಿದ್ದಲ್ಲಿ ಪ್ರಜ್ವಲ್ ಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.
ಇನ್ನು ಬಂಧನ ಭೀತಿಯಿಂದ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂಕಾರ್ನರ್ ನೊಟೀಸ್ ಹೊರಡಿಸಲಾಗಿದ್ದು, ಪ್ರಜ್ವಲ್ ರೇವಣ್ಣ ಚಲನವಲನದ ಮೇಲೆ ಎಸ್ ಐ ಟಿ ಕಣ್ಣಿಡಲು ಮುಂದಾಗಿದೆ. ನಿನ್ನೆ ಪ್ರಜ್ವಲ್ ರೇವಣ್ಣಗೆ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿದೆ. ಜೊತೆಗೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ ಎಂದು ಎಸ್‌ಐಟಿ ತಿಳಿಸಿದೆ.