ತನಗೆ ಮಾದಕ ದ್ರವ್ಯ (ಡ್ರಗ್ಸ್ )ನೀಡಿ ,ತನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಕ್ವೀನ್ಸ್ ಲ್ಯಾಂಡ್ ಸಂಸದೆ ಬ್ರಿಟಾನಿ ಲೌಗಾ, ಗಂಭೀರ ಆರೋಪ ಮಾಡಿದ್ದಾರೆ. ಅವರದ್ದೆ ಕ್ಷೇತ್ರವಾದ ಯೆಪ್ಪೂನ್ ನಲ್ಲಿ , ಏಪ್ರಿಲ್ 28ರ ರಾತ್ರಿ, ವಾಯುವಿಹಾರಕ್ಕೆ ಹೋದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬ್ರಿಟಾನಿ ಲೌಗಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ .
ಕ್ವೀನ್ಸ್‌ಲ್ಯಾಂಡ್‌ನ ಯೆಪ್ಪೂನ್ ಬ್ರಿಟಾನಿ ಲೌಗಾರ ಸ್ವಂತ ಕ್ಷೇತ್ರವಾಗಿದ್ದು , ನನ್ನದೇ ಕ್ಷೇತ್ರದಲ್ಲಿ ರಾತ್ರಿ ವೇಳೆ ತನಗೆ ಡ್ರಗ್ಸ್ ನೀಡಲಾಗಿದೆ .”ನನಗೆ ಆದ ರೀತಿ ಬೇರೆ ಮಹಿಳೆಯರಿಗೂ ಆಗಬಹುದು, ಈ ರೀತಿಯ ಘಟನೆ ನಮ್ಮಲ್ಲಿ ಅನೇಕರಿಗೆ ಆಗಿರಬಹುದು ಎಂದು ಹೇಳಿದ್ದಾರೆ . ಇವರ ಪೋಸ್ಟ್ ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ಘಟನೆಯ ನಂತರ 37 ವರ್ಷದ ಸಂಸದೆ ,ಮೊದಲು ಪೊಲೀಸ್ ಠಾಣೆಗೆ ದೂರು ನೀಡಿದ್ದು ನಂತರ ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ತಾನು ಡ್ರಗ್ಸ್ ತೆಗೆದುಕೊಳ್ಳದಿದ್ದರೂ, ನನ್ನ ದೇಹದಲ್ಲಿ ಡ್ರಗ್ಸ್ ಇದೆ ಅಂತ ರಿಪೋರ್ಟ್ ಬಂದಿದೆ. ಈ ಡ್ರಗ್ಸ್ ತನ್ನ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಶನಿವಾರ ರಾತ್ರಿ ಇನ್ನು ಅನೇಕ ಮಹಿಳೆಯರಿಗೂ ಡ್ರಗ್ಸ್ ನೀಡಲಾಗಿದೆ . ಆ ಮಹಿಳೆಯರು ಕೂಡ ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ .
ನಮ್ಮ ನಗರದಲ್ಲೇ ನಾವು ಸುರಕ್ಷಿತವಾಗಿಲ್ಲ ಮತ್ತು ಈ ರೀತಿಯ ಕ್ರೌರ್ಯದ ಪ್ರಕರಣಗಳು ಆಗುತ್ತಿದ್ದರೆ ನಾವು ಹೊರಗೆ ಹೋಗುವುದು ಸರಿಯಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ . ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಸ್ಟ್ರೇಲಿಯಾ ಪೊಲೀಸರು, ಕೂಲಂಕುಷ ತನಿಖೆಯನ್ನು ಆರಂಭಿಸಿದ್ದಾರೆ.
ಆಘಾತಕಾರಿ ಘಟನೆ: ವಸತಿ ಸಚಿವ
ಕ್ವೀನ್ಸ್ ಲ್ಯಾಂಡ್ ವಸತಿ ಸಚಿವ ಮೇಘನ್ ಸ್ಕ್ಯಾನ್ಲಾನ್ ಈ ಆರೋಪಗಳನ್ನು ಆಘಾತಕಾರಿ ಮತ್ತು ಭಯಾನಕ ಎಂದು ಬಣ್ಣಿಸಿದ್ದಾರೆ. “ಬ್ರಿಟಾನಿ ಕ್ವೀನ್ಸ್ ಲ್ಯಾಂಡ್
ಸಂಸತ್ತಿನಲ್ಲಿ ಸಹೋದ್ಯೋಗಿ ಅಷ್ಟೇ ಅಲ್ಲ, ಒಬ್ಬ ಯುವ ಮಹಿಳೆ ಮತ್ತು ಸ್ನೇಹಿತೆಯೂ ಆಗಿದ್ದಾಳೆ. ಈ ಸುದ್ದಿ ಆಘಾತಕಾರಿಯಾಗಿದೆ” ಎಂದು ಸ್ಕ್ಯಾನ್ಲಾನ್ ಹೇಳಿದ್ದು, ಮಹಿಳೆಯರನ್ನು ರಕ್ಷಿಸಲು ಮತ್ತು ಹಿಂಸಾಚಾರವನ್ನು ತಡೆಗಟ್ಟಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.