ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಪಟ್ಟಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಪ್ರಜ್ವಲ್ ನ ಮಾಜಿ ಕಾರ್ ಚಾಲಕ ಕಾರ್ತಿಕ್ ಜೊತೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಕಾರ್ತಿಕ್ , ಶ್ರೇಯಸ್ ಇಬ್ಬರು ಜಿಗರಿ ದೋಸ್ತ್ ಹಾಗೆ ಕೈ ಕೈ ಹಿಡಿದುಕೊಕೊಂಡು ಪೋಸ್ ಕೊಟ್ಟಿದ್ದಾರೆ.

ವಿಡಿಯೋ ಕಿಂಗ್ ಪಿನ್ ಕಾರ್ತಿಕ್ ಜೊತೆ ಶ್ರೇಯಸ್ ಪಟೇಲ್ ಗೆ ನಂಟಿದೆ ಅಂತ ಮೊನ್ನೆಮೊನ್ನೆಯಷ್ಟೇ ಬಿಜೆಪಿ ಮುಖಂಡ ದೇವೆರಾಜೇಗೌಡ ಆರೋಪ ಮಾಡಿದ್ದರು. ಆದರೆ ಇದೆಲ್ಲ ಸುಳ್ಳು, ನನಗು ಕಾರ್ತಿಕ್ ಗು ಯಾವುದೇ ಸಂಬಂಧವಿಲ್ಲ, ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಅಂತ ನಿನ್ನೆಯಷ್ಟೇ ಶ್ರೇಯಸ್ ಪಟೇಲ್ ಹೇಳಿಕೆ ನೀಡಿದ್ದರು. ಆದ್ರೀಗ ವೀಡಿಯೋ ಕಿಂಗ್‌ಪಿನ್ ಕಾರ್ತಿಕ್ ಜೊತೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇರುವ ಫೋಟೋಗಳು ವೈರಲ್ ಆಗುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದನ್ನು ವೈರಲ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ದಿನವೇ ಕಾರ್ತಿಕ್ ಜೊತೆ ಪುಟ್ಟಿ (ಪುಟ್ಟರಾಜ್) ಮನೆಯಲ್ಲಿ ಶ್ರೇಯಸ್ ಊಟ ಮಾಡಿದ್ದಾರೆ ಎನ್ನಲಾದ ಫೋಟೊಗಳಿವು .
ಹಾಗೇನೇ ಈ ಪೆನ್ ಡ್ರೈವ್ ಅನ್ನು ಇದೆ ಪುಟ್ಟಿ (ಪುಟ್ಟರಾಜ್) ಡಿಸಿಎಂ ಡಿ.ಕೆ ಶಿವಕುಮಾರ್ ಗೆ ತಲುಪಿಸಿದ್ದು ಎಂದು ಬಿಜೆಪಿ ಮುಖಂಡ ದೇವೆರಾಜೇ ಗೌಡ ಆರೋಪಿಸಿದ್ದರು.
ಕಾರ್ತಿಕ್ ಎಲ್ಲಿದ್ದಾರೆ? ವಿದೇಶಕ್ಕೆ ಕಳಿಸಿದ್ದು ಯಾರು?
ಎಸ್ಐಟಿ ಅಧಿಕಾರಿಗಳು ಮಾತ್ರ ತಾರತಮ್ಯ ವಹಿಸುತ್ತಿದ್ದು, ಸರಿಯಾಗಿ ತನಿಖೆ ಮಾಡುತ್ತಿಲ್ಲವೆಂದು ಹೆಚ್.ಡಿ.ಕೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ಮಾಜಿ ಕಾರ್ ಚಾಲಕ ಕಾರ್ತಿಕ್ ಎಲ್ಲಿದ್ದಾರೆ? ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿಲ್ಲ ಯಾಕೆ? ಅಂತ ಹೆಚ್. ಡಿ. ಕುಮಾರಸ್ವಾಮಿ ಮೊನ್ನೆಮೊನ್ನೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಕಾರ್ತಿಕ್ ಈ ಪ್ರಕರಣದಲ್ಲಿ ಕಿಂಗ್ ಪಿನ್ ಆಗಿದ್ದರು, ಅವರನ್ನು ದೇಶ ಬಿಟ್ಟು ಓಡಿಸುವಲ್ಲಿ ಅಧಿಕಾರದಲ್ಲಿರುವವರು ಸಹಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

ಇವತ್ತು ವೈರಲ್ ಆಗುತ್ತಿರುವ ಫೋಟೋಸ್ ನೋಡುತ್ತಿದ್ದರೆ ಕುಮಾರಸ್ವಾಮಿ ಮತ್ತು ದೇವೆರಾಜೇಗೌಡರ ಆರೋಪದಲ್ಲಿ ಸತ್ಯಾಂಶವಿದೆಯೇನೋ ಅನ್ನೋ ಅನುಮಾನ ಮೂಡುತ್ತಿದೆ ಅಂತ ಜನಸಾಮಾನ್ಯರು ಮಾತಾಡುತ್ತಿದ್ದಾರೆ.