ಬೆಂಗಳೂರು: ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಹೆಚ್ಡಿ ರೇವಣ್ಣ ವಿರುದ್ಧ ದಾಖಲಾದ ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರೇವಣ್ಣ ಜೈಲು ಪಾಲಾಗಿದ್ದಾರೆ. ಮೇ. 4 ರಂದು ಎಸ್ ಐಟಿ ಅಧಿಕಾರಿಗಳು ಪದ್ಮನಾಭ ನಗರದ ಹೆಚ್ ಡಿ ದೇವೇಗೌಡರ ನಿವಾಸದಿಂದ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಎಸ್ ಐಟಿ ಕೋರ್ಟ್ ಗೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ಅಂದರೆ ಇಂದಿನವರೆಗೆ ಕಸ್ಟಡಿಗೆ ಪಡೆದಿತ್ತು. ಆದರೆ ಇಂದಿಗೆ ಅವರ ಎಸ್ ಐಟಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ 7 ದಿನಗಳ ಕಾಲ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇಂದು ಹೆಚ್.ಡಿ ರೇವಣ್ಣ ಅವರ ಎಸ್‌ಐಟಿ ವಶದ ಕಾಲಾವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಾಧೀಶರು. ಅವರ ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಿ, 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಹೀಗಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲುಪಾಲು ಆದಂತೆ ಆಗಿದೆ. ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡೋ ಸಾಧ್ಯತೆ ಇದೆ.