ಕೆ.ಆರ್ .ನಗರದ ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಮಾಜಿ ಸಚಿವ ರೇವಣ್ಣ ಬೆಂಗಳೂರು ಸೆಂಟ್ರಲ್ ಜೈಲ್ ಸೇರಿದ್ದಾರೆ .ನಿನ್ನೆ ಸಂಜೆ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಹೀಗಾಗಿ ರೇವಣ್ಣ ಈಗ ವಿಚಾರಣಾಧೀನ ಖೈದಿ . ಇವ್ರಿಗೆ 4567 ನಂಬರ್ ನ್ನು ನೀಡಲಾಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ರೇವಣ್ಣ ಇದೀಗ ಸೆರೆವಾಸ ಅನುಭವಿವಿಸುತ್ತಿದ್ದಾರೆ. ರೇವಣ್ಣಗೆ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, VIP CELL ನಲ್ಲಿ ಓರ್ವ ಭದ್ರತಾ ಸಿಬ್ಬಂದಿಯನ್ನೂ ನೀಡಲಾಗಿದೆ. ಮೊದಲನೆ ದಿನ ಯಾರ ಜೊತೆಯೂ ಮಾತನಾಡದೆ ರೇವಣ್ಣ ಮೌನಕ್ಕೆ ಶರಣಾಗಿದ್ದಾರೆ .
ನಿನ್ನೆ ರಾತ್ರಿ ಸಾಮಾನ್ಯ ಖೈದಿಗಳು ಸೇವಿಸುವ ಆಹಾರವನ್ನೇ ಸೇವಿಸಿದ್ದಾರೆ ಎನ್ನಲಾಗಿದೆ.ರಾತ್ರಿ ಮುದ್ದೆ, ಚಪಾತಿ, ರೈಸ್ ,ಸಾಂಬಾರ್ ಊಟ ಮಾಡಿದ ನಂತ್ರ ಒಂದು ಗಂಟೆಯವರೆಗೂ ನಿದ್ದೆ ಮಾಡಿರಲಿಲ್ಲವಂತೆ. ಮನೆಯವರು ಕೊಟ್ಟಿದ್ದ ಬಟ್ಟೆಯನ್ನು ಧರಿಸಿ ಲೇಟಾಗಿ ನಿದ್ದೆ ಮಾಡಿದ್ದಾರೆ ಎನ್ನಲಾಗಿದೆ. ನನಗೆ ಆರೋಗ್ಯ ಸಮಸ್ಯೆ ಇದೆ , ಹೀಗಾಗಿ ಜಾಮೀನು ನೀಡಿ ಅಂತ ನಿನ್ನೆ ನ್ಯಾಯಾಧೀಶರ ಮುಂದೆ ರೇವಣ್ಣ ಗೋಗರೆದಿದ್ದರು. ಆದರೆ ನ್ಯಾಯಾಧೀಶರು ಇವರ ಜಾಮೀನು ಅರ್ಜಿಯನ್ನ ತಿರಸ್ಕರಿಸಿ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ ಜೈಲಿನ ಸಿಬ್ಬಂದಿ ಇವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಇನ್ನು ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊ೦ಡಿರುವ ರೇವಣ್ಣ , ಜೈಲಿನಲ್ಲಿಯೂ ವಾಕಿಂಗ್ ಮಾಡಿದ್ದಾರೆ .
ರೇವಣ್ಣ ಅವ್ರು ಏನೇ ಕೆಲಸ ಮಾಡಬೇಕು ಅಂದ್ರು ಅದಕ್ಕೆ ಶುಭ ಮುಹೂರ್ತ, ಕಾಲ, ಗಳಿಗೆ ಎಲ್ಲವನ್ನು ನೋಡಿ , ಜ್ಯೋತಿಷ್ಯವನ್ನ ಕೇಳಿಯೇ ಶುರು ಮಾಡುವ ರಾಜಕಾರಣಿ. ಇವ್ರಿಗೆ ದೇವರು , ಪೂಜೆ- ಪುನಸ್ಕಾರದ ಮೇಲೆ ಅಪಾರ ನಂಬಿಕೆ. ಆದ್ರೆ ನಿನ್ನೆ ಅಮವಾಸ್ಯೆ ದಿನಾನೇ ರೇವಣ್ಣ ಜೈಲು ಸೇರುವಂತಾಗಿದೆ. 17ನೇ ಎಸಿಎಂಎಂ ನ್ಯಾಯಾಲಯ ಇವ್ರಿಗೆ ಮೇ 14 ರ ತನಕ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದೆ. ಇಂದು ಕೂಡ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ರೇವಣ್ಣ ಅವ್ರಿಗೆ ಜಾಮೀನು ಸಿಗುತ್ತಾ ಅಂತ ನೋಡಬೇಕು .