ಚಿಕ್ಕಮಗಳೂರು: ಖಾಸಗಿ ಉರ್ದು ಶಾಲೆಯ ಶಿಕ್ಷಕನೊಬ್ಬ ಹಿಂದೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೊಗರಿ ಹಂಕಲ್ ಗ್ರಾಮದಲ್ಲಿ ನಡೆದಿದೆ. ಹಿಂದೂ ಮಹಿಳೆಯ ಮೈಕೈ ಮುಟ್ಟಿ ಶಿಕ್ಷಕ ದೌರ್ಜನ್ಯ ಎಸಗಿದ್ದಾನೆಂದು ಬೆಂಗಳೂರು ಮೂಲದ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಉರ್ದು ಶಾಲೆಯ ಶಿಕ್ಷಕ ಅಬ್ದುಲ್ ರೆಹಮಾನ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕ ಪರಾರಿಯಾಗಿದ್ದಾನೆ.
ಶಾಲೆಯಲ್ಲಿ ಪಾಠದ ಜೊತೆಗೆ ಮಾಟ ಮಂತ್ರ ಮಾಡುತ್ತಿದ್ದ ಶಿಕ್ಷಕ ಅಬ್ದುಲ್ ರೆಹಮಾನ್ ಬಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಹಿಳೆ ಬಂದಿದ್ದಾಳೆ. ಆಗ ನನ್ನನ್ನು ಮುಟ್ಟು ನಿನಗೆ ಗಂಡನ ಫೀಲಿಂಗ್ ಆಗುತ್ತೆ ಎಂದ ಅಬ್ದುಲ್ ರೆಹಮಾನ್ ಮಹಿಳೆಯ ಹೊಟ್ಟೆಯ ಭಾಗಕ್ಕೆ ಕೈ ಹಾಕುತ್ತಿದ್ದಂತೆ ಮಹಿಳೆ ಅಲ್ಲಿಂದ ಹೊರ ಬಂದಿದ್ದಾಳೆ. ತಕ್ಷಣ ತನಗಾದ ಲೈಂಗಿಕ ದೌರ್ಜನ್ಯ ಕುರಿತು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸ್ಥಳೀಯರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ರಾತ್ರೋರಾತ್ರಿ ಶಿಕ್ಷಕ ಊರು ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಉರ್ದು ಶಾಲೆಯ ಕಮಿಟಿ ಊರನ್ನೇ ತೊರೆಯಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.