ಮಂಡ್ಯ; ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಹದೇವು ಅನ್ನುವವರ ಪುತ್ರ ನಿಖಿಲ್ (16) ನೇಣಿಗೆ ಶರಣಾದ ವಿದ್ಯಾರ್ಥಿ . ನಿಖಿಲ್ ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಖಿಲ್ ವ್ಯಾಸಂಗ ಮಾಡ್ತಿದ್ದ . ರಿಸಲ್ಟ್ ಬಂದ ತಕ್ಷಣ ಶಾಲೆಗೆ ಹೋಗಿ ನೋಡಿದಾಗ 3 ವಿಷಯದಲ್ಲಿ ಫೇಲ್ ಆಗಿದ್ದ. ಇದ್ರಿಂದ ಮನನೊಂದಿದ್ದ. ಈ ವೇಳೆ ಶಿಕ್ಷಕರು ಅವನಿಗೆ ಧೈರ್ಯ ತುಂಬಿ, ಮುಂದಿನ ಸಲ ಪರೀಕ್ಷೆಗೆ ಚೆನ್ನಾಗಿ ಓದು ,ಸಿದ್ಧತೆ ಮಾಡಿಕೋ, ಪಾಸ್ ಆಗ್ತೀಯಾ ಎಂದು ಹೇಳಿ ಕಳುಸಿದ್ದರು ಎನ್ನಲಾಗಿದೆ. ಆದರೆ ಫೇಲ್ ಆದ ವಿಷಯ ಕೇಳಿ ಎಲ್ಲಿ ಮನೆಯವರು ಬೈತಾರೋ ಎಂದು ಹೆದರಿಕೊಂಡು, ನಿಖಿಲ್ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿಖಿಲ್ ಮೃತದೇಹ ನೋಡಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು . ಈ ಬಗ್ಗೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ