ಕೊಡಗು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ತಲೆ ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.
34 ವರ್ಷದ ಪಾಗಲ್ ಪ್ರೇಮಿ ಓಂಕಾರಪ್ಪ ಈ ಹತ್ಯೆ ಮಾಡಿರುವ ಆರೋಪಿ. 16 ವರ್ಷದ ಮೀನಾ ಹತ್ಯೆಯಾದ ದುರ್ದೈವಿ. ಮೀನಾ ಅಪ್ರಾಪ್ತೆಯಾದರೂ ಈಕೆ ಮನೆಯವರು ಓಂಕಾರಪ್ಪನೊಂದಿಗೆ ಮೀನಾ ನಿಶ್ಚಿತಾರ್ಥವನ್ನ ನಿನ್ನೆ (ಮೇ 9) ಫಿಕ್ಸ್ ಮಾಡಿದ್ದರು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಧ್ಯಾಹ್ನ ನಿಶ್ಚಿತಾರ್ಥ ಆಗುವಾಗ ಸ್ಥಳಕ್ಕೆ ಬಂದು ತಡೆದಿದ್ದರು. ಅಲ್ಲದೇ ಹುಡುಗಿ ಇನ್ನೂ ಅಪ್ರಾಪ್ತೆ ಎಂದು ಹೇಳಿ ಆವಾಜ್ ಹಾಕಿ , ನಿಶ್ಚಿತಾರ್ಥ ರದ್ದು ಮಾಡಿ, ಎರಡು ಕಡೆಯವರನ್ನೂ ಮನೆಗೆ ಕಳಿಸಿದ್ದರು. ನಿಶ್ಚಿತಾರ್ಥ ನಿಂತು ಹೋಯಿತ್ತಲ್ಲ ಅಂತ ಓಂಕಾರಪ್ಪ ಕೋಪಗೊಂಡಿದ್ದ. ಇದೇ ವಿಚಾರಕ್ಕೆ ಸಂಜೆ ಮೀನಾ ಮನೆಗೆ ಹೋಗಿ ಮನೆಯವರೊಂದಿಗೆ ಜಗಳವಾಡಿದ್ದನಂತೆ.
ಜಗಳ ಮಾಡಿದ ನಂತರ ಮೀನಾಳನ್ನ ಮನೆಯಿಂದ ಎಳೆದೊಯ್ದು , ನಿರ್ಜನ ಪ್ರದೇಶಕ್ಕೆ ಕರೆದುಕೊಡು ಹೋಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ .ನಂತ್ರ ಆಕೆಯ ರುಂಡ ಮುಂಡ ಬೇರೆ ಬೇರೆ ಮಾಡಿ ತಲೆಯನ್ನ ತೆಗೆದುಕೊಂಡು ಆರೋಪಿ ಓಂಕಾರಪ್ಪ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೀನಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾದಾ ಖುಷಿಯಲ್ಲಿದ್ದಳು. ಚೆನ್ನಾಗಿ ಓದಿ ಗ್ರಾಮಕ್ಕೆ ಹೆಸರು ತಂದಿದ್ದಳು. ಹೀಗಾಗಿ ಮೀನಾ ಪೋಷಕರು ಕೂಡ ಸಂತೋಷದಿಂದ ಇದ್ದರು.ಆದ್ರೆ ಇವರ ಖುಷಿ ಜಾಸ್ತಿ ಹೊತ್ತು ಇರಲಿಲ್ಲ. ಅವರ ಪ್ರೀತಿಯ ಮಗಳನ್ನ ಹುಚ್ಚು ಪ್ರೇಮಿ ಓಂಕಾರಪ್ಪ ಕೊಚ್ಚಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.