ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿರುವ ಹೆಚ್ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿನ್ನೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು ಇಂದು ಸಂಜೆ ಜೈಲಿನಿಂದ ಬಿಡುಗಡೆಯಾದಗಲಿದ್ದಾರೆ.
ಇಂದು ನ್ಯಾಯಾಧೀಶರಿಂದ ಬಿಡುಗಡೆ ಆದೇಶ ಬಂದಿದ್ದು, ಇಂದು ಸಂಜೆ ಬಳಿಕ ಹೆಚ್ ಡಿ ರೇವಣ್ಣ ಅವರು ಎಲ್ಲಾ ಪ್ರೊಸಿಜರ್ಸ್ ಮುಗಿಸಿದ ಬಳಿಕ ರಿಲೀಸ್ ಆಗಲಿದ್ದಾರೆ. ಹೆಚ್ ಡಿ ರೇವಣ್ಣ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ. ಅದರಂತೆ 5 ಲಕ್ಷ ಬಾಂಡ್ ನೀಡಬೇಕು, ಸಾಕ್ಷಾಧಾರವನ್ನು ನಾಶಪಡಿಸಬಾರದು, ಎಸ್‌ಐಟಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ಬದ್ಧ ಜಾಮೀನು ನೀಡಲಾಗಿದೆ.