ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಜೈಲುಪಾಲಾಗಿದ್ದ ಹೆಚ್.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜಾಮೀನು ಸಿಕ್ಕಿದ ಬೆನ್ನಲ್ಲೇ ರೇವಣ್ಣ ಟೆಂಪಲ್ ರನ್ ಶುರು ಮಾಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಮೊದಲು ಪದ್ಮನಾಭನಗರದಲ್ಲಿರುವ ತಂದೆಯ ನಿವಾಸಕ್ಕೆ ಭೇಟಿ ನೀಡಿದ್ರು. ಅಲ್ಲಿಂದ ನೇರವಾಗಿ ಜೆಪಿ ನಗರದಲ್ಲಿರುವ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಇನ್ನು ರೇವಣ್ಣ ನಾಳೆ ಶೃಂಗೇರಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ನಿನ್ನೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದ್ದು, ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ. ರೇವಣ್ಣ ಜೈಲಿನಿಂದ ಹೊರಬರ್ತಿದ್ದಂತೆ ಅಭಿಮಾನಿಗಳು ಜಯಘೋಷ ಹಾಕಿ ಸಂಭ್ರಮಿಸಿದ್ರು. ಹಾಗೇ ದೇವೇಗೌಡರ ನಿವಾಸಕ್ಕೆ ತೆರಳಿ ವಾಪಾಸ್ ಆಗುವಾಗ್ಲೂ ಕಾರ್ಯಕರ್ತರು ಜಮಾಯಿಸಿದ್ದು ಈ ವೇಳೆ ರೇವಣ್ಣ ಭಾವುಕರಾದರು.