ಬೆಂಗಳೂರು; ಶೋಕಿಗಾಗಿ ಮೈ ತುಂಬಾ ಸಾಲ ಮಾಡಿಕೊಂಡಿದ್ದ ಯುವತಿಯೊಬ್ಬಳು ಕೊನೆಗೆ ಸಾಲಗಾರರ ಕಾಟ ತಾಳಲಾರದೇ ಮನೆ ಮಾಲಕಿಯನ್ನೇ ಕೊಂದ ಘಟನೆ ಕೆಂಗೇರಿಯ ಕೋನಸಂದ್ರದಲ್ಲಿ ನಡೆದಿದೆ. ಮೋನಿಕಾ (24) ಬಂಧಿತ ಆರೋಪಿ.

ಕೊಲೆಯಾದ ದಿವ್ಯಾ
ಖಾಸಗಿ ಕಂಪನಿಯಲ್ಲಿ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಆರೋಪಿ ಮೋನಿಕ ಊರೆಲ್ಲಾ ಸಾಲ ಮಾಡಿಕೊಂಡಿದ್ದಳು. ಕೋಲಾರದವಳಾದ ಮೋನಿಕ ದಿವ್ಯಾ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದಳು. ಮೂರು ತಿಂಗಳ ಹಿಂದಷ್ಟೇ ಇಲ್ಲಿಗೆ ಬಾಡಿಗೆಗೆ ಬಂದಿದ್ದಳು.ತನ್ನ ಪ್ರಿಯಕರನನ್ನ ಗಂಡ ಎಂದು ಹೇಳಿ ಮನೆ ಬಾಡಿಗೆ ಪಡೆದಿದ್ದಳು ಮೋನಿಕಾ. ಬಳಿಕ ಒಬ್ಬಂಟಿಯಾಗಿದ್ದು, ಪ್ರಿಯಕರ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಕೊಲೆಗಾತಿ ಮೋನಿಕ ರೀಲ್ಸ್ ..
ಇತ್ತ ವಿಪರೀತ ಶೋಕಿ ಹೊಂದಿದ್ದ ಮೋನಿಕ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಅಲ್ಲದೇ ಜೊತೆ ಪ್ರಿಯಕರನಿಗೆ ಟಾಟಾ ಎಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಿರುವಾಗ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕ ಕಣ್ಣು ಬಿದ್ದಿತ್ತು.ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು.ದಿವ್ಯಾ ಅತ್ತೆ ಮಾವ ಬೆಳಿಗ್ಗೆಯೇ ಕೆಲಸಕ್ಕೆ ಹೋಗುತ್ತಿದ್ದರು.ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇದ್ದರು. ದಿವ್ಯಾಳ ಆಭರಣದ ಮೇಲೆ ಕಣ್ಣು ಹಾಕಿದ ಮೋನಿಕ ಮೇ.10 ರಂದು ಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೋನಿಕಳನ್ನು ಅರೆಸ್ಟ್ ಮಾಡಿದ್ದಾರೆ.
ಕೊಲೆಗಾತಿ ಮೋನಿಕ ರೀಲ್ಸ್ ..