ನಿನ್ನೆಯಷ್ಟೇ ಹಾಸನ ನಗರದಲ್ಲಿ ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳು ನೀರು ಪಾಲಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇವತ್ತು ರಾಮನಗರದಲ್ಲಿ ಮೂವರು ಮಕ್ಕಳು ನೀರಿನ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ. ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಬಂಡೆ ಮೇಲಿರುವ ತಗ್ಗು ಪ್ರದೇಶದ ಹೊಂಡಕ್ಕೆ ಶುಕ್ರವಾರದ ನಮಾಜ್ ಮುಗಿಸಿ ಎಂಟು ಮಕ್ಕಳು ಈಜಲು ತೆರಳಿದ್ದರು. ಎಂಟು ಬಾಲಕರಲ್ಲಿ ಮೂವರು ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶಹಬಾಜ್ (14), ಸುಲ್ತಾನ್ (13) ರೀಹಾನ್ (16 )ಮೃತ ಬಾಲಕರು. ಮೃತರೆಲ್ಲರೂ ರಾಮನಗರದ ಸುಲ್ತಾನ್ ನಗರದ ನಿವಾಸಿಗಳಾಗಿದ್ದರು. ಸುದ್ದಿ ತಿಳಿದ ತಕ್ಷಣ
ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದು ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ