ಹಾಸನ ಪೆನ್ ಡ್ರೈವ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಬಿಜೆಪಿ ಮುಖಂಡ ದೇವರಾಜೇ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣದು ಎನ್ನಲಾದ ಪೆನ್ ಡ್ರೈವ್ ಗೆ , ಡಿಕೆ ಶಿವಕುಮಾರ್ 100 ಕೋಟಿ ಆಫರ್ ಕೊಟ್ಟಿದ್ರು ನನಗೆ ಅಂತ ನಿನ್ನೆ ದೇವರಾಜೇಗೌಡರು ಜೈಲಿಗೆ ಹೋಗೋಕೂ ಮುನ್ನ ವ್ಯಾನ್ ನಲ್ಲಿ ಕೂತು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾನವರಿಗೆ ಎಲ್ಲಾ ಗೊತ್ತಿದೆ ಅಂತ ದೇವರಾಜೇಗೌಡರು ತುಂಬಾ ದಿನಗಳ ಹಿಂದೆಯೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಅಮಿತ್ ಶಾ ಭಾಗಿಯಾಗಿರಬಹುದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನವರ ಹೆಸರು ಕೆಡಿಸಲು ಅಮಿತ್ ಶಾ ಪ್ಲಾನ್ ಮಾಡಿರಬಹುದು,100 ಕೋಟಿ ಆಫರ್ ಇದೆ ಅಂತ ಅಮಿತ್ ಶಾನವರಿಗೆ ಯಾಕೆ ಹೇಳಲಿಲ್ಲ? ಹೇಳಿ ತನಿಖೆ ಮಾಡಿಸಬಹುದ್ದಿತ್ತಲ್ವಾ? ಸಿಬಿಐ , ಐಟಿ ದಾಳಿ ಮಾಡಿಸಬಹುದ್ದಿತ್ತಲ್ವಾ ಅಂತಾ ದೇವರಾಜೇಗೌಡರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
5 ಕೋಟಿ ಯಾವ ಕ್ಲಬ್ ಲ್ಲಿ ಕೊಟ್ಟಿದ್ದಾರೋ ಅದರ ಸಿಸಿಟಿವಿ ತೆಗೆಸಿ, ಸರ್ಕಾರದ ಯಾವ ಮಿನಿಸ್ಟರ್ ಇದರಲ್ಲಿ ಶಾಮೀಲಾಗಿದ್ದಾರೆ ಗೊತ್ತಾಗುತ್ತೆ. 5 ಕೋಟಿ ರೂಪಾಯಿ ಹೇಗೆ ತೆಗೆದುಕೊಂಡು ಹೋಗಬೇಕು, ಎಷ್ಟು ಟೆಂಪೋ ಬೌರಿಂಗ್ ಕ್ಲಬ್ ಒಳಗೆ ಹೋದವು ಅಂತ ಬಿಜೆಪಿಯವರಿಗೆ ಚೆನ್ನಾಗಿ ಗೊತ್ತು. ಯಾಕಂದರೆ ಅವ್ರಿಗೆ ಆಪರೇಷನ್ ಕಮಲ ಮಾಡಿ ರೂಢಿ ಇದೆ ಅಂತ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ದೇವರಾಜೇಗೌಡರು ಸ್ವತಃ ಒಬ್ಬ ಲಾಯರ್. ಅವರಿಗೆ ಕಾನೂನು ಪ್ರಕ್ರಿಯೆ ಚೆನ್ನಾಗಿ ಗೊತ್ತು. ದಾಖಲೆಗಳು ಇದ್ದರೆ, ನ್ಯಾಯಾಲಯದಲ್ಲಿ ಸಲ್ಲಿಸಬೇಕಿತ್ತು. ವ್ಯಾನ್ ನಲ್ಲಿ ಕೂತು ಹೇಳಿದ್ರೆ, ಅದನ್ನ ಸಾಕ್ಷಿ ಅಂತ ಹೇಳೋಕೆ ಆಗಲ್ಲ ಎಂದು ದೇವರಾಜೇಗೌಡರ ಮೇಲೆಯೇ ಖರ್ಗೆ ಆರೋಪ ಮಾಡಿದ್ದಾರೆ.