ಹಾಸನ: ಜೈಲಿನಿಂದ ರಿಲೀಸ್ ಆದ ಬಳಿಕ ಮೊದಲ ಬಾರಿಗೆ ಹೊಳೆನರಸೀಪುರ ಜೆಡಿಎಸ್ ಶಾಸಕ ರೇವಣ್ಣ ಹಾಸನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಾಸಕರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

20 ದಿನಗಳ ನಂತ್ರ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಹಾಸನದ ಹೊಳೆನರಸೀಪುರದಲ್ಲಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಹೊಳೆನರಸೀಪುರಕ್ಕೆ ಸಾಗುತ್ತಿದ್ದಂತೆ ದಾರಿಯುದ್ಧಕ್ಕೂ ರೇವಣ್ಣ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು.

ಹೆಚ್.ಡಿ ರೇವಣ್ಣ ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಮಹಿಳೆ ಅಪಹರಣ ಕೇಸಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಬಳಿಕ ಟೆಂಪಲ್ ರನ್ ಕೂಡ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಡೆಸಿದ್ದರು.ಇಂದು 20 ದಿನಗಳ ಬಳಿಕ ಅವರು ಹಾಸನ ಜಿಲ್ಲೆಗೆ ಆಗಮಿಸಿದ್ದಾರೆ.

ಇನ್ನು ಹೊಳೆನರಸೀಪುರಕ್ಕೆ ಹೋಗುತ್ತಿದ್ದಂತೆ ಕಿರಿಸಾವೆಯಲ್ಲಿ ಕಾರ್ಯಕರ್ತರ ಸ್ವಾಗತಕ್ಕೆ ಹೆಚ್.ಡಿ ರೇವಣ್ಣ ಭಾವುಕರಾದರು. ಜೊತೆಗೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾರಿನಿಂದ ಕೆಳಗೆ ಇಳಿದು, ನಮಸ್ಕರಿಸಿ ತೆರಳಿದ್ದಾರೆ ಎನ್ನಲಾಗಿದೆ.