Saturday, August 8, 2026
Homeಕ್ರೈಮ್ಶಿವಮೊಗ್ಗ : ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ದುರ್ಘಟನೆ: 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು...

ಶಿವಮೊಗ್ಗ : ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ದುರ್ಘಟನೆ: 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ: 2 ವರ್ಷದ ಮಗುವಿನ ರಕ್ಷಣೆ ಮಾಡಿದ 12 ವರ್ಷದ ಬಾಲಕ

Telegram Group
Join Now

ಶಿವಮೊಗ್ಗ: ನಾಳೆ ನಡೆಯಲಿರುವ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸಿದ್ದತೆ ವೇಳೆ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಾಬಳ್ಳಿ ಬಳಿ ನಡೆದಿದೆ.

ಜಾತ್ರೆ ಹಿನ್ನೆಲೆ ಗಂಗೆ ಪೂಜೆ ಮಾಡಲು ಹೊರಡುವ ವೇಳೆ  ಈ ಅನಾಹುತ ನಡೆದಿದ. ಪೊದೆಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ದಾಳಿ ನಡೆಸಿದ್ದು, ಇದ್ರಿಂದ ಗಾಯಗೊಂಡವರಿಗೆ ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇನ್ನು ಹೆಜ್ಜೇನು ದಾಳಿ ವೇಳೆ ಎರಡು ವರ್ಷದ ಮಗುವನ್ನು 12 ವರ್ಷದ ಬಾಲಕನೊಬ್ಬ ರಕ್ಷಣೆ ಮಾಡಿದ ದೃಶ್ಯವೂ ಕಂಡುಬಂತು. ಗಗನ್‌ ಎಂಬ ಬಾಲಕ 10 ಕ್ಕೂ ಹೆಚ್ಚು ಹೆಜ್ಜೇನು ಕಚ್ಚಿಸಿಕೊಂಡರೂ ಸಹ ಎರಡು ವರ್ಷದ ಬಾಲಕನನ್ನ ರಕ್ಷಣೆ ಮಾಡಿದ್ದಾನೆ.  

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments