ಹಾಸನ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಹೆಚ್.ಡಿ.ರೇವಣ್ಣ ಇಂದು ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ರು. ಈ ವೇಳೆ ತಮ್ಮ ಮೇಲಿರುವ ಎರಡು ಪ್ರಕರಣಗಳ ವಿಚಾರವಾಗಿ ಮಾತನಾಡಿ, ಯಾರೂ ಆತಂಕ ಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ, ಟೈಂ ಬೇಕು ಅಷ್ಟೇ. ನಮ್ಮ ಜಿಲ್ಲೆಯ ಜನರನ್ನು ಅರವತ್ತು ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನೀದ್ದೀನಿ, ಎ.ಮಂಜು, ಸ್ವರೂಪ್‌ಪ್ರಕಾಶ್ ಇದ್ದಾರೆ. ಯಾರೂ ಭಯಪಡುವ, ಆತಂಕಪಡುವ ಅಗತ್ಯವಿಲ್ಲ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ ಎಂದರು.
ಇನ್ನು ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನತೆಯ ಶಕ್ತಿಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ. ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡಲ್ಲ. ಅಧಿಕಾರ ಇದ್ದರೂ ಕೆಲಸ ಮಾಡ್ತೀವಿ, ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡ್ತೀವಿ ಎಂದರು.
ಇನ್ನು 48 ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಬರಬೇಕು ಎಂಬ ಎಚ್.ಡಿ.ಕುಮಾರಸ್ವಾಮಿ ಮನವಿ ವಿಚಾರವಾಗಿ ಕೋರ್ಟ್‌ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡಲ್ಲ ಎಂದು ರೇವಣ್ಣ ಹೇಳಿದ್ರು.