Tuesday, August 11, 2026
Homeಜಿಲ್ಲಾಸುದ್ದಿರಘುಪತಿ ಭಟ್‌ರ ಮನೆಗೆ ಹೋದಾಗ ಗೇಟಲ್ಲಿ ನಿಲ್ಲಿಸಿ ವಾಪಾಸ್ ಕಳುಹಿಸಿದ್ರು: ಕರೆ ಮಾಡಿದ್ರೂ ಸ್ವೀಕರಿಸಲಿಲ್ಲ: ಬಿಜೆಪಿ...

ರಘುಪತಿ ಭಟ್‌ರ ಮನೆಗೆ ಹೋದಾಗ ಗೇಟಲ್ಲಿ ನಿಲ್ಲಿಸಿ ವಾಪಾಸ್ ಕಳುಹಿಸಿದ್ರು: ಕರೆ ಮಾಡಿದ್ರೂ ಸ್ವೀಕರಿಸಲಿಲ್ಲ: ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ತಿರುಗೇಟು

Telegram Group
Join Now

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಅಭ್ಯರ್ಥಿ ತನ್ನನ್ನು ಸಂಪರ್ಕಿಸಿಯೇ ಇಲ್ಲ ಎಂದು ಆರೋಪಿಸಿದ್ರು. ಈ ಹಿನ್ನೆಲೆ ರಘುಪತಿ ಭಟ್ ಆರೋಪಕ್ಕೆ ತಿರುಗೇಟು ಕೊಟ್ಟ ಬಿಜೆಪಿ ಅಭ್ಯರ್ಥಿ ಡಾ ಧನಂಜಯ್ ಸರ್ಜಿ, ರಘುಪತಿ ಭಟ್ ಮನೆಯ ಗೇಟಲ್ಲಿ ನಿಲ್ಲಿಸಿ ನಮ್ಮನ್ನು ವಾಪಾಸ್ ಕಳುಹಿಸಿದ್ರು ಎಂದಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ರಘುಪತಿ ಭಟ್ ಗೆ ಮಿಸ್ ಕಾಲ್ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮಿಸ್ ಕಾಲ್ ಕೊಟ್ಟಿರೋದು ಎಲ್ಲಿ ಅನ್ನೋದು ಇಂಪಾರ್ಟೆಂಟ್. ವಿಧಾನಪರಿಷತ್ ಸದಸ್ಯ ಅರುಣ್ ಜೊತೆ ರಘುಪತಿ ಭಟ್ ಅವರ ಹೊಸ ಮನೆಗೆ ಹೋಗಿದ್ದೆ. ಅವರಿಗಾಗಿ ಮನೆಗೆ ಹೋಗಿ ನಾನು ಕಾದಿದ್ದೆ. ಸೆಕ್ಯೂರಿಟಿ ಗಾರ್ಡ್ ಬಳಿ ಎಂಎಲ್ಸಿ ಅರುಣ್ ಬಂದಿದ್ದಾರೆ ಎಂದು ಹೇಳಿ ಕಳುಹಿಸಿದೆ. ಅವರು ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದ ಎಂದು ಧನಂಜಯ್ ಸರ್ಜಿ ಹೇಳಿದ್ರು.

ಅಲ್ಲದೇ ರಘುಪತಿ ಭಟ್ಗೆ ಮಾಹಿತಿ ನೀಡಲು ಹೇಳಿದರೂ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ರಘುಪತಿ ಭಟ್ಟರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾನು ಕೂಡ ಅವರಿಗೆ ಎರಡು ಬಾರಿ ಕರೆ ಮಾಡಿದೆ. ಟಿಕೆಟ್ ಘೋಷಣೆ ಆದಾಗಲೂ ರಘುಪತಿ ಭಟ್ ಗೆ ಕರೆ ಮಾಡಿದ್ದೆ. ಎಂಎಲ್ಸಿ ಅರುಣ್ ಕರೆ ಮಾಡಿದಾಗಲೂ ಅವರು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ರು.

ಸರ್ಜಿ ಸೌಜನ್ಯಕ್ಕೂ ಸಂಪರ್ಕ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ಮನೆಯ ಗೇಟಲ್ಲಿ ನಿಲ್ಲಿಸಿ ನಮ್ಮನ್ನು ವಾಪಸು ಕಳುಹಿಸಿದರು. ಇದೊಂದು ವಿಪರ್ಯಾಸದ ಸಂಗತಿ. ಬಿಜೆಪಿ ಸಂಘಟನೆಯ ಶಕ್ತಿ ಇರುವ ಪಕ್ಷ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಶಕ್ತಿ ಇರುವುದು ನಮ್ಮ ಕಾರ್ಯಕರ್ತರಲ್ಲಿ ಎಂದು ರಘುಪತಿ ಭಟ್‌ಗೆ ಧನಂಜಯ್ ಟಾಂಗ್ ಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments