
ಚಿಕ್ಕಮಗಳೂರು/ಕಳಸ: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಳುವಳ್ಳಿ ತಾರಿಕೊಂಡ ಗ್ರಾಮದಲ್ಲಿ ನಡೆದಿದೆ. 21 ವರ್ಷದ ರಮ್ಯಾ ಮೃತ ದುರ್ದೈವಿ. ನಿನ್ನೆಯಷ್ಟೇ 21ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ ರಮ್ಯಾ ಇಂದು ಸಾವಿಗೆ ಶರಣಾಗಿರೋದು ಹಲವಾರು ಅನುಮಾನಗಳನ್ನ ಹುಟ್ಟುಹಾಕಿದೆ.

ಕೆಲ ಮೂಲಗಳ ಪ್ರಕಾರ, ಅಕ್ಕ ತಂಗಿಯ ಹೊಸ ಬಟ್ಟೆ ಕೊಳ್ಳುವ ವಿಚಾರದಲ್ಲಿ ಗಲಾಟೆ ಏರ್ಪಟ್ಟು, ಆ ಜಗಳ ವಿಕೋಪಕ್ಕೆ ಹೋಗಿ ಈ ರೀತಿ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗಿದೆ ಅಂತಾ ಹೇಳಲಾಗ್ತಿದೆ. ಇನ್ನೂ ಇಂದು ಮನೆಯವರೆಲ್ಲರೂ ಸಂಬಂಧಿಕರೊಬ್ಬರ ಮನೆಯ ಮದುವೆಗೆ ಹೋಗಿ ಬರುವ ವೇಳೆ ಇತ್ತ ರಮ್ಯಾ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ವಿಚಾರ ಗೊತ್ತಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

