ಮಂಗಳೂರು: ನಡುರಸ್ತೆಯಲ್ಲಿಯೇ ಮ್ಯಾಟ್ ಹಾಸಿ ಯುವಕರ ತಂಡವೊಂದು ನಮಾಝ್ ಮಾಡಿದ್ದಾರೆನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಮಂಗಳೂರಿನ ಕಂಕನಾಡಿಯ ಬಳಿಯ ಮಸೀದಿ ಮುಂಭಾಗ ಇರುವ ರಸ್ತೆಯಲ್ಲಿಯೇ ನಮಾಝ್ ಮಾಡಿದ್ದು ಇದ್ರಿಂದ ವಾಹನ ಸವಾರರಿಗೆ ಸಂಚಾರಕ್ಕೆ ತೊಡಕುಂಟಾಗಿದೆ.

ರಸ್ತೆಯಲ್ಲಿಯೇ ನಮಾಝ್ ಮಾಡಿದ್ರಿಂದ ವಾಹನ ಸವಾರರು ಯೂಟರ್ನ್ ಹೊಡೆದುಕೊಂಡು ಸಂಚರಿಸಿದ್ದಾರೆ. ಕಳೆದ ಶುಕ್ರವಾರ ನಮಾಜ್ ಮಾಡಿದ್ದಾರೆನ್ನಲಾಗಿದ್ದು, ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಳೆ ಸುರಿದು ರಸ್ತೆಯೆಲ್ಲಾ ಒದ್ದೆಯಂತಾಗಿದ್ರು, ಅಲ್ಲೇ ಮ್ಯಾಟ್ ಹಾಕಿ ನಮಾಜ್ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.