ಚಿಕ್ಕಮಗಳೂರು : ಅರ್ಚಕರೊಬ್ಬು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಯ್ಸಳಲಿನಲ್ಲಿ ನಡೆದಿದೆ.ಹೊಯ್ಸಳಲು ದೇವಾಲಯದ ಅರ್ಚಕ ಭಾಸ್ಕರ್ ಶಾಸ್ತ್ರಿ (65) ನೇಣಿಗೆ ಶರಣಾದವರು.

ಗೋಣಿಬೀಡು ಮಂಡಿ ಮನೆ ನಿವಾಸಿಯಾಗಿದ್ದ ಭಾಸ್ಕರ್ ಶಾಸ್ತ್ರೀ ಅವರು ಹೊಯ್ಸಳಲಿನ ಈಶ್ವರ ದೇವಸ್ಥಾನದಲ್ಲಿ ಪೂಜೆ ಮಾಡ್ತಿದ್ದರು. ಭಾಸ್ಕರ್ ಶಾಸ್ತ್ರಿ ಅವರು ಪತ್ನಿಯನ್ನ ಕಳೆದುಕೊಂಡು ಒಬ್ಬರೇ ವಾಸವಾಗಿದ್ದರು. ಶಾಸ್ತ್ರ ಹೇಳುತ್ತಾ ಮೂಡಿಗೆರೆ ಭಾಗದಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ಆದರೆ ಇದೀಗ ಮನನೊಂದು ಅವರು ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
