ನಂಜನಗೂಡು: ಅಪಾರ ದೈವ ಭಕ್ತೆಯಾಗಿರೋ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿನ್ನೆ(ಮಂಗಳವಾರ) ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಅರ್ಚನೆ ಮಾಡಿಸಿದ ನಂತರ ದೇವಾಲಯದ ವಸಂತ ಮಂಟಪದಲ್ಲಿ ಕೆಲ ಕಾಲ ಕುಳಿತು ಧ್ಯಾನದಲ್ಲಿ ತಲ್ಲೀನರಾಗಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ಮೈಸೂರಿನ ಇಲವಾಲದಲ್ಲಿ ನಮ್ಮ ಸಿನಿಮಾದ ಶೂಟಿಂಗ್ ನಡೆಯುತ್ತಿದೆ, ನಾನು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಮಹಿಮೆ ಬಗ್ಗೆ ಬಹಳಾ ಕೇಳಿದ್ದೆ. ಹೀಗಾಗಿ ಇಲ್ಲಿಗೆ ಬಂದಿದ್ದೇನೆ, ದೇವರ ದರ್ಶನ ಪಡೆದು ಸಂತೋಷವಾಯ್ತು ಎಂದು ಹರ್ಷ ವ್ಯಕ್ತಪಡಿಸಿದರು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮೋಸ್ಟ್ expected ಚಿತ್ರ ‘ಕೆಡಿ – ದಿ ಡೆವಿಲ್’ ಸಿನಿಮಾದಲ್ಲಿ ಶಿಲ್ಪ ಶೆಟ್ಟಿ ನಟಿಸುತ್ತಿದ್ದಾರೆ. ಬಹಳ ವರ್ಷಗಳ ನಂತರ ಶಿಲ್ಪ ಶೆಟ್ಟಿ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ಅಭಿನಯಿಸುತ್ತಿದ್ದು, ರವಿಚಂದ್ರನ್, ರಮೇಶ್ ಅರವಿಂದ್ ಅವರಂತಹ ಘಟಾನುಘಟಿ ಕಲಾವಿದರು ತೆರೆ ಹಂಚಿಕೊಳ್ಳುತ್ತಿದ್ದಾರೆ.