ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ, ಓಂ ಶಾಂತಿ ಎಂಬ ಪೋಸ್ಟರ್ ವೊಂದು ವೈರಲ್ ಆಗಿದ್ದು, ಈ ಬಗ್ಗೆ ಪ್ರಜ್ವಲ್ ದೇವರಾಜ್ ಕುಟುಂಬ ಬೇಸರ ವ್ಯಕ್ತಪಡಿಸಿದೆ. ಕೆಲ ಕಿಡಿಗೇಡಿಗಳು ನಟನ ಫೋಟೋ ದುರ್ಬಳಕೆ ಮಾಡಿಕೊಂಡು ಹೀಗೆ ಸುಳ್ಳು ಸುದ್ದಿ ಹಬ್ಬಿಸಿದ್ದು, ಇದ್ರಿಂದ ಅಭಿಮಾನಿಗಳು ಕೆಲಕಾಲ ಆತಂಕಗೊಂಡಿದ್ರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ಆಪ್ತಮೂಲ, ಪ್ರಜ್ವಲ್ ದೇವರಾಜ್ ಕ್ಷೇಮವಾಗಿದ್ದಾರೆ. ನಟನ ಬಗ್ಗೆ ಈ ರೀತಿ ಸುಳ್ಳುಸುದ್ದಿ ಹಬ್ಬಿಸಿರೋದು ಸರಿಯಲ್ಲ. ಪ್ರಜ್ವಲ್ ಆರೋಗ್ಯದ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಕುಟುಂಬದವರು ದೂರು ನೀಡಲು ನಿರ್ಧರಿಸಿದ್ದಾರೆಂದು ತಿಳಿಸಿವೆ. ಅಲ್ಲದೇ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ. ಪ್ರಜ್ವಲ್ ಆರೋಗ್ಯವಾಗಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.
ಈಗಾಗಲೇ ಪ್ರಜ್ವಲ್ ಮೂರ್ನಾಲ್ಕು ಪ್ರಾಜೆಕ್ಟ್ ಒಪ್ಪಿಕೊಂಡಿದ್ದು ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಹೀಗೊಂದು ಪೋಸ್ಟರ್ ವೈರಲ್ ಆಗ್ತಿದ್ದು, ಸಹಜವಾಗೇ ಪ್ರಜ್ವಲ್ ಹಾಗೂ ಕುಟುಂಬಂದವರಿಗೆ ಬೇಸರ ಉಂಟುಮಾಡಿದೆ.