ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಮೊನ್ನೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು ನಿನ್ನೆ ಅವರನ್ನು 1 ವಾರಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬದೊಂದಿಗೆ ವಿಶ್ರಾಂತಿಗಾಗಿ ತಮ್ಮ ಕುಟುಂಬದೊಂದಿಗೆ ರೆಸಾರ್ಟ್ ಗೆ ತೆರಳಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯ ಬಿರುಸಿನ ಪ್ರಚಾರ ಮತ್ತು ಸಭೆಗಳಲ್ಲಿ ಹೀಗೆ ತೀವ್ರ ಒತ್ತಡದಲ್ಲಿದ್ದ ಕುಮಾರಸ್ವಾಮಿ ಸದ್ಯ ರಿಲ್ಯಾಕ್ಸ್ ಮೂಡಲಿನಲ್ಲಿದ್ದಾರೆ.

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ, ಮೊಮ್ಮಗ ಅವಿಯಾನ್ ದೇವ್ ಕುಮಾರಸ್ವಾಮಿ ವಿಶ್ರಾಂತಿಯಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೋಟಿಂಗ್ ಮಾಡಿ ಕುಟುಂಬದೊಂದಿಗೆ ರಿಲ್ಯಾಕ್ಸ್ ಆದರು ಎನ್ನಲಾಗಿದೆ.
