Monday, August 4, 2025
!-- afp header code starts here -->
Homeಕ್ರೈಮ್ಶಿವಮೊಗ್ಗ : ಅನ್ಯಕೋಮಿನ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ..!

ಶಿವಮೊಗ್ಗ : ಅನ್ಯಕೋಮಿನ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ..!

ಶಿವಮೊಗ್ಗ: ಅನ್ಯಕೋಮಿನ ಸಹೋದ್ಯೋಗಿ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ನಗರದ ಆರ್ ಎಂ ಎಲ್ ನಗರದ ಸಮೀಪ ನಡೆದಿದೆ. ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ನಂದನ್ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.

ಈತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಅನ್ಯ ಕೋಮಿನ ಸಹೋದ್ಯೋಗಿಯನ್ನು ಕೆಲಸದ ನಿಮಿತ್ತ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ 20 ಕ್ಕೂ ಹೆಚ್ಚು ಯುವಕರು ನಂದನ್‌ನನ್ನು ತಡೆದು ಥಳಿಸಿದ್ದಾರೆ. ನಮ್ಮ ಜನಾಂಗದ ಹುಡುಗಿಯನ್ನು ಯಾಕೆ ಬೈಕ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಯುವಕರ ಗುಂಪು ನಂದನ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ನಂದನ್ ಕಣ್ಣು, ಕಿವಿ ಮತ್ತು ಬಾಯಿಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇನ್ನು ಆಸ್ಪತ್ರೆಗೆ ಭೇಟಿ ನೀಡಿ ನಂದನ್ ಆರೋಗ್ಯ ವಿಚಾರಿಸಿದ ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ನಂದನ್‌ಗೆ ಧೈರ್ಯ ಹೇಳಿ, ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

ಹಾಗೇ ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಅಭದ್ರತೆಯ ಸ್ಥಿತಿಗೆ ಕಾಂಗ್ರೆಸ್ ತಳ್ಳುತ್ತಿದೆ. ಸರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೊಲೀಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!