ಚಿಕ್ಕಮಗಳೂರು : ರಾಜ್ಯದಲ್ಲಿ ತಂದೆಯ ಹಾದಿ ಹಿಡಿದು ಮಕ್ಕಳು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಕ್ರಿಯರಾಗಿರುವ ಅನೇಕ ನಿದರ್ಶನಗಳು ನಮ್ಮೆದುರಿಗಿದೆ. ಸದ್ಯ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಮಕ್ಕಳು ರಾಜಕೀಯಕ್ಕೆ ಬರ್ತಾರಾ ಅನ್ನು ಪ್ರಶ್ನೆಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಐಶ್ವರ್ಯ ಅವರು ನಡೆಸುತ್ತಿರುವ ಅಂಬರ್ ವ್ಯಾಲಿ ಶಾಲೆಯಲ್ಲಿ ರಾಷ್ಟ್ರಮಟ್ಟದ ಕ್ವಿಜ್ ಸ್ಪರ್ಧೆ ನಡೆದಿತ್ತು. ಈ ವೇಳೆ ಪಬ್ಲಿಕ್ ಇಂಪ್ಯಾಕ್ಟ್ ಜತೆಗೆ ಮಾತುಕತೆಗೆ ಸಿಕ್ಕಿದ್ರು ಐಶ್ವರ್ಯ. ಈ ವೇಳೆ ನಾವು ಇದೇ ಪ್ರಶ್ನೆಯನ್ನ ಅವರೆದುರಿಗಿಟ್ಟೆವು… ರಾಜಕೀಯಕ್ಕೇನಾದ್ರು ಬರ್ತೀರಾ ನೀವು ಅಂತ ಕೇಳಿದ್ದಕ್ಕೆ, ಅಂಥ ಯಾವ್ದೇ ಯೋಚನೆ ನನಗಿಲ್ಲ. ಅದರ ಕಡೆಗೆ ಆಸಕ್ತಿಯೂ ಇಲ್ಲ. ಶಿಕ್ಷಣ ಕ್ಷೇತ್ರ ನನ್ನ ಆಸಕ್ತಿ. ಅದರಲ್ಲೇ ಖುಷಿಯಾಗಿದ್ದೇನೆ. 5 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಅದರಲ್ಲಿ ತೊಡಗಿಸಿಕೊಳ್ಳುವುದರಲ್ಲೇ ನನ್ನ ಸಮಯ ಕಳೆಯುತ್ತದೆ. ರಾಜಕೀಯ ನನ್ನ ಆಸಕ್ತಿಯಲ್ಲ, ಯಾರೂ ನನ್ನ ಒತ್ತಾಯವನ್ನೂ ಮಾಡಿಲ್ಲ. ನನ್ನ ಆಸಕ್ತಿಯ ವಿಚಾರದಲ್ಲಿ ತಂದೆಯವರು ಕೂಡಾ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ರು…

