ಚಿಕ್ಕಮಗಳೂರು : ವಂದೇ ಮಾತರಂ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪುಟಾಣಿಗಳಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾನುವಾರ ಸಂಜೆ ಶಂಕರಾಪುರ ಮಠದಲ್ಲಿ ನಡೆದ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವರ್ಣರಂಜಿತವಾಗಿ ಕೃಷ್ಣ-ರಾಧೆಯ ವೇಷ ಧರಿಸಿ ಪುಟಾಣಿಗಳು ಸಂಭ್ರಮಿಸಿದ್ರು. ಮಕ್ಕಳ ಸಂಭ್ರಮ ನೋಡಿ ಪೋಷಕರು ಕೂಡಾ ಖುಷಿಪಟ್ರು… ಆ ಸುಂದರ ಕ್ಷಣದ ಚಿತ್ರಗಳು ಇಲ್ಲಿವೆ ನೋಡಿ…










