ಹುಬ್ಬಳ್ಳಿ : ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ದರ್ಶನ್ ಬಿಂದಾಸ್ ಜೀವನ ನಡೆಸ್ತಿರುವ ಪ್ರಕರಣದಲ್ಲಿ ಸರ್ಕಾರದ ವೈಫಲ್ಯ ಇದೆ ಎಂದು ಸಂಸದ ಪ್ರಲ್ಹಾದ್ ಜೋಷಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವ್ರು, ಈ ಹಿಂದೆ ಕಾಂಗ್ರೆಸ್‌ನ ಮುಖಂಡರು ದರ್ಶನ್ ರಕ್ಷಣೆಗೆ ಮುಂದಾಗುತ್ತಿರುವ ಬಗ್ಗೆ ವರದಿಯಾಗಿತ್ತು. ಈಗಿನ ಬೆಳವಣಿಗೆ ನೋಡಿದಾಗ ಜನಸಾಮಾನ್ಯರಿಗೆ ನ್ಯಾಯವಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ರೌಡಿ ಶೀಟರ್ ಜತೆ ಕುಳಿತುಕೊಂಡು ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಇರೋದು ದಿಕ್ಕು ತಪ್ಪಿಸುವ ಪ್ರಯತ್ನ. ಜತೆಗೆ ಸಾಕ್ಷಿಗಳನ್ನ ಬೆದರಿಸುವ ಪ್ರಯತ್ನ ಈ ಮೂಲಕ ಆಗುತ್ತಿದೆ. ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುವ ತರಾತುರಿಯಲ್ಲಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ಕನಿಷ್ಟ ನೈತಿಕತೆ ಅನ್ನೋದು ಬೇಕು. ಕಾರಾಗೃಹ ಡಿಜಿಪಿ ಇಷ್ಟು ದಿನ ಏನು ಮಾಡುತ್ತಿದ್ರು? ಈಗ ತನಿಖೆಗೆ ಮುಂದಾಗಿದ್ದಾರೆ. ಇದರಲ್ಲಿ ಸರ್ಕಾರದ ಸಂಚು ಇದೆ. ದರ್ಶನ್‌ನನ್ನು ಬಿಡುಗಡೆಗೆ ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದರು.
ರೌಡಿ ಶೀಟರ್ ಜತೆ ಸೋ ಕಾಲ್ಡ್ ಹೀರೋ ಇದ್ದಾನೆ ಅಂದ್ರೆ ಸಾಕ್ಷಿಗಳಿಗೆ ಬೆದರಿಸೋಕೆ ರೆಡಿಯಾಗಿದ್ದಾನೆ ಅಂತ ಅರ್ಥ – ಪ್ರಲ್ಹಾದ್ ಜೋಷಿ ಕಿಡಿ
RELATED ARTICLES