ಮಂಡ್ಯ : ನೂರು ಕೋಟಿ ಅಂದ್ರೆ ಅದೇನು ಕಡ್ಲೆಪುರಿನಾ ಅಂತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಮುಖಂಡರ ಜತೆಗೆ ಕುಮಾರಸ್ವಾಮಿಯೂ ಸೇರಿಕೊಂಡು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 100 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆಂಬ ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಕ್ಕೆ ಪ್ರತಿಕ್ರಿಯಿಸಿದ ಅವ್ರು, ನೂರು ಕೋಟಿ ಅಂದ್ರೆ ಅದ್ರ ಸಂಖ್ಯೆ ಗೊತ್ತಿದ್ಯಾ ಅವ್ರಿಗೆ. 50 ಜನಕ್ಕೆ 5 ಸಾವಿರ ಕೋಟಿ. ಒಂದು ಸರ್ಕಾರ ಬೀಳಿಸೋಕೆ ಇಷ್ಟು ಹಣ ಅಂದ್ರೆ ಯಾರಾದ್ರು ನಂಬುತ್ತಾರಾ ಎಂದು ಪ್ರಶ್ನಿಸಿದರು.
ನನ್ನ ಭಜನೆ ಮಾಡದಿದ್ರೆ ಕೆಲವರಿಗೆ ತಿಂದ ಅನ್ನ ಕರಗಲ್ಲ. ಎಲ್ಲರಿಗೂ ಕುಮಾರಸ್ವಾಮಿನೇ ಟಾರ್ಗೆಟ್ ಆಗಿದ್ದೇನೆ. ಸರ್ಕಾರ ಹೋಗುತ್ತೆ ಅಂತ ದಿನಾ ಅವ್ರೇ ಭಜನೆ ಮಾಡ್ತಿದ್ದಾರೆ. ಅದಕ್ಕೆ ನಾವೇನು ಮಾಡೋಣ ಅಂತ ಪ್ರತಿಕ್ರಿಯಿಸಿದ್ರು.


