Friday, February 13, 2026
Homebig breakingಮಂಡ್ಯ ನಗರಸಭೆ ಚುನಾವಣೆ : ರಾಜಕೀಯದಲ್ಲಿ ಆಮಿಷವೆಲ್ಲ ಸಹಜ ಅಂದ್ರು ನಿಖಿಲ್‌ ಕುಮಾರಸ್ವಾಮಿ

ಮಂಡ್ಯ ನಗರಸಭೆ ಚುನಾವಣೆ : ರಾಜಕೀಯದಲ್ಲಿ ಆಮಿಷವೆಲ್ಲ ಸಹಜ ಅಂದ್ರು ನಿಖಿಲ್‌ ಕುಮಾರಸ್ವಾಮಿ

ಪಬ್ಲಿಕ್‌ ಇಂಪ್ಯಾಕ್ಟ್‌ ಮಂಡ್ಯ : ರಾಜಕೀಯದಲ್ಲಿ ಆಮಿಷಗಳೆಲ್ಲ ಸಹಜ. ಹೀಗಿದ್ದರೂ ಮಂಡ್ಯ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಅಧಿಕಾರಕ್ಕೇರಿದೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.
ಚುನಾವಣೆ ಬಳಿಕ ಪ್ರತಿಕ್ರಿಯಿಸಿದ ಅವರು, 37 ಮತದಾರರಲ್ಲಿ 19 ಮಂದಿ ನಮಗೆ ಮತ ಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ರು. ನಾವು ಆ ಸವಾಲನು ಸ್ವೀಕಾರ ಮಾಡಿದ್ದೆವು ಎಂದರು.
ನಮ್ಮ‌ ಸದಸ್ಯರು ಆಮಿಷಕ್ಕೆ ಒಳಗಾಗಲಿಲ್ಲ. ರಾಜಕೀಯ ಅಂದರೆ ಆಮಿಷ ಎಲ್ಲಾ ಸಹಜ. ಅಂತಿಮವಾಗಿ ನಂಬರ್ ಅನ್ನೋದು ಮುಖ್ಯವಾಗುತ್ತೆ. ನಾವು ಆ ನಂಬರ್‌ ಅನ್ನು ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಚುನಾವಣೆಗಳಲ್ಲಿ ಕೂಡಾ ಎನ್‌ಡಿಎ ಗೆಲ್ಲುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!