ಪಬ್ಲಿಕ್ ಇಂಪ್ಯಾಕ್ಟ್ ಬೆಂಗಳೂರು & ಬಳ್ಳಾರಿ : ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ನನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಗುರುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲ್ನಿಂದ ಹೊರಟು ಬೆಳಗ್ಗೆ 10 ಗಂಟೆ ವೇಳೆಗೆ ಬಳ್ಳಾರಿ ಜೈಲಿಗೆ ಕರೆತರಲಾಯಿತು. ಕೈಗೆ ಕೋಳ ತೊಡಿಸಿ ಬಿಗಿ ಭದ್ರತೆಯಲ್ಲಿ ಕರೆತಂದ ಅಧಿಕಾರಿಗಳು ಜೈಲಿನ ಪ್ರಕ್ರಿಯೆ ಮುಗಿಸಿ ಸೆಲ್ಗೆ ಸ್ಥಳಾಂತರಿಸಿದರು. ದರ್ಶನ್ಗೆ ಕೈದಿ ಸಂಖ್ಯೆ 511 ನೀಡಲಾಗಿದೆ ಅಂತ ತಿಳಿದುಬಂದಿದೆ.
ದರ್ಶನ್ ಜತೆಗೆ ಇತರೆ ಆರೋಪಿಗಳನ್ನೂ ಏಕಕಾಲದಲ್ಲಿ ಬೇರೆ ಜೈಲ್ಗೆ ಶಿಫ್ಟ್ ಮಾಡಲಾಗಿದೆ.


