Monday, September 28, 2026
Homeಕ್ರೈಮ್ಸೌಜನ್ಯ ಕೊಲೆ ಪ್ರಕರಣ - ಮೂರು ಅರ್ಜಿಯನ್ನೂ ವಜಾ ಮಾಡಿದ ಹೈಕೋರ್ಟ್…‌

ಸೌಜನ್ಯ ಕೊಲೆ ಪ್ರಕರಣ – ಮೂರು ಅರ್ಜಿಯನ್ನೂ ವಜಾ ಮಾಡಿದ ಹೈಕೋರ್ಟ್…‌

Telegram Group
Join Now

ಪಬ್ಲಿಕ್‌ ಇಂಪ್ಯಾಕ್ಟ್ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನ ಕರ್ನಾಟಕ ಹೈಕೋರ್ಟ್ ವಜಾ ಗೊಳಿಸಿದೆ.
ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರವಿಲ್ಲ ಎಂದು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈಗ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮರು ತನಿಖೆ ಕೋರಿ ಸೌಜನ್ಯ ಪೋಷಕರು ತಾಯಿ ಕುಸುಮಾವತಿ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಅಕ್ರಮ ಬಂಧನಕ್ಕೆ ಪರಿಹಾರವನ್ನು ಕೋರಿ ಸಂತೋಷ್ ರಾವ್ ಕೂಡಾ ಅರ್ಜಿ ಹಾಕಿದ್ದರು. ಅದನ್ನು ಕೂಡಾ ನ್ಯಾಯಾಲಯ ವಜಾ ಮಾಡಿದೆ. 2012ರ ಅ.9ರಂದು ಸೌಜನ್ಯಳನ್ನ ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!