Monday, September 28, 2026
Homeಜಿಲ್ಲಾಸುದ್ದಿಪತ್ರಕರ್ತರ ಹೆಸರಿನಲ್ಲಿ ಅಕ್ರಮವಾಗಿ ಜಮೀನು ಮಂಜೂರು ಆರೋಪ - ಎರಡನೇ ಮುಡಾ ಹಗರಣ ಎಂದ ಆಯನೂರು...

ಪತ್ರಕರ್ತರ ಹೆಸರಿನಲ್ಲಿ ಅಕ್ರಮವಾಗಿ ಜಮೀನು ಮಂಜೂರು ಆರೋಪ – ಎರಡನೇ ಮುಡಾ ಹಗರಣ ಎಂದ ಆಯನೂರು ಮಂಜುನಾಥ್‌

Telegram Group
Join Now

ಶಿವಮೊಗ್ಗ : ಪತ್ರಕರ್ತರ ಹೆಸರಿನಲ್ಲಿ ಅಕ್ರಮವಾಗಿ ಸೈಟ್‌ ಮಂಜೂರು ಮಾಡಲಾಗಿದ್ದು, ಮುಡಾಗಿಂತಲು ದೊಡ್ಡ ಹಗರಣ ಶಿವಮೊಗ್ಗಲ್ಲಿ ಆಗಿದೆ ಅಂತ ಮಾಜಿ ಸಂಸದ ಆಯನೂರು ಮಂಜುನಾಥ್‌ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪತ್ರಕರ್ತರ ಹೆಸರಿನಲ್ಲಿ ಅಕ್ರಮವಾಗಿ ನಿವೇಶನವನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಮಂಜೂರು ಮಾಡಿಸಿದ್ದಾರೆ. ನಂತರ ಅದನ್ನು ಯಾರ್ಯಾರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಅನ್ನೋದನ್ನು ಬಿಜೆಪಿಯವ್ರು ಬಹಿರಂಗಪಡಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲೆಯ ಸಂಸದರು ಏನು ಹೇಳುತ್ತಾರೆ ಈ ಬಗ್ಗೆ ಎಂದು ಪ್ರಶ್ನಿಸಿದರು.
ಪತ್ರಕರ್ತರ ಹೆಸರಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಇಲ್ಲಿನ ನೈಜ ಪತ್ರಕರ್ತರಿಗೆ ಗೊತ್ತಿದೆ. ಅವರು ಈ ವಿಚಾರದ ಕುರಿತು ವಾಸ್ತವತೆಯನ್ನು ಜನರ ಮುಂದಿಡಬೇಕು. ನಕಲಿ ಹೋರಾಟಗಾರರ ನೈಜ ಮುಖ ಹೊರಜಗತ್ತಿಗೆ ತಿಳಿಯಬೇಕು ಅಂತ ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!