ಬೆಂಗಳೂರು : ರಾಜ್ಯದ ಉಪಮುಖ್ಯಮಂತ್ರಿ ಅವರಿಗೆ ಬೈಕ್‌ಗಳಂದ್ರೆ ವಿಶೇಷ ಕ್ರೇಜ್. ಪಕ್ಷದ Rallyಗಳಲ್ಲಿ ತಾವೇ ಬೈಕ್ ಚಾಲನೆ ಮಾಡಿಕೊಂಡು ಭಾಗಿಯಾಗಿದ್ದನ್ನ ನೋಡಿದ್ದೇವೆ. ಆದ್ರೆ ಡಿ.ಕೆ. ಶಿವಕುಮಾರ್ ಅವರ ಮೊದಲ ಬೈಕ್ ಯಾವ್ದು ಗೊತ್ತಾ..?

ಇಲ್ಲಿ ಈ ಫೋಟೋದಲ್ಲಿದೆ ನೋಡಿ, ಇದೇ ಯೆಸ್ಡಿ ರೋಡ್‌ಕಿಂಗ್ ಬೈಕ್ ಡಿ.ಕೆ. ಶಿವಕುಮಾರ್ ಅವರು ಮೊದಲು ಕೊಂಡ ಬೈಕ್. ಕಾಲೇಜು ದಿನಗಳಲ್ಲಿ ಈ ಬೈಕ್‌ನಲ್ಲಿ ತಮ್ಮ ಹವಾ ಸೃಷ್ಟಿಸಿದ್ದ ಶಿವಕುಮಾರ್, ರಾಜಕೀಯಕ್ಕೆ ಬಂದ ನಂತರ ಆರಂಭದ ಕೆಲ ದಿನ ಬಳಕೆ ಮಾಡಿದ್ದರು. ನಂತರದಲ್ಲಿ ಇದು ಮೂಲೆ ಗುಂಪಾಗಿತ್ತು. ಮೂಲೆ ಸೇರಿ ಧೂಳು ಹಿಡಿದಿದ್ದ ಈ ಬೈಕ್‌ಗೆ ಈಗ ಹೊಸ ಲುಕ್ ಬಂದಿದೆ.

ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎಂಬವರು ಈ ಬೈಕ್ ನವೀಕರಣ ಮಾಡಿದ್ದು, ಹೊಸ ಲುಕ್‌ನಲ್ಲಿ ಡಿಕೆಶಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಡಿ.ಕೆ. ಶಿವಕುಮಾರ್ ಪೋಸ್ಟ್ ಹಾಕಿದ್ದು, ʼನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತುʼ ಅಂತ ಹೇಳಿಕೊಂಡಿದ್ದಾರೆ.






