ಉಡುಪಿ: ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾಗುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಕಾಪು ತಾಲೂಕಿನ ಕಡಲ ತೀರದಲ್ಲಿ ಘಟನೆ ನಡೆದಿದ್ದು, ಕಾಪು ಪಡು ಗ್ರಾಮದ ನಿವಾಸಿ ಸಚಿನ್(31) ಎಂಬ ಯುವಕನನ್ನು ರಕ್ಷಣೆ ಮಾಡಲಾಗಿದೆ.

ಸಾಂಪ್ರದಾಯಿಕ ಮೀನುಗಾರಿಕಾ ಬಲೆ ಹಾಕಲು ಬಲೆಯೊಂದಿಗೆ ತೆರಳಿದ್ದ ಸಚಿನ್ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಿದ್ದಾನೆ.

ಸಚಿನ್ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೊಬ್ಬೆ ಹಾಕಿದ್ದಾರೆ. ನಂತರ ಸ್ಥಳೀಯ ಮೀನುಗಾರರಾದ ಶರ್ಮ ಮತ್ತು ಹರೀಶ್ ಕರ್ಕೇರ ಸಚಿನ್ ನನ್ನು ರಕ್ಷಣೆ ಮಾಡಿದ್ದಾರೆ.