Monday, August 4, 2025
!-- afp header code starts here -->
Homebig breakingನಿಮಗೆ ಹಲ್ಲು ನೋವು ಕಾಡ್ತಿದ್ಯಾ..! ಹೀಗೆ ಮಾಡಿದ್ರೆ ಕ್ಷಣದಲ್ಲಿ ಮಾಯ..!

ನಿಮಗೆ ಹಲ್ಲು ನೋವು ಕಾಡ್ತಿದ್ಯಾ..! ಹೀಗೆ ಮಾಡಿದ್ರೆ ಕ್ಷಣದಲ್ಲಿ ಮಾಯ..!

ಚಿಕ್ಕಮಗಳೂರು : ಹಲ್ಲು ನೋವು ಸಣ್ಣ ವಯಸ್ಸಿನಿಂದ ಇಳಿವಯಸ್ಸಿನವರಿಗೂ ಕಾಡುವ ಬಾಧೆ. ಒಂದಿಲ್ಲೊಂದು ಕಾರಣದಿಂದ ಹಲ್ಲು ನೋವು ಕಾಣಿಸಿಕೊಳ್ಳುತ್ತೆ. ಸಹಿಸಿಕೊಳ್ಳಲಾಗದಷ್ಟು ನೋವು ನಮ್ಮನ್ನ ಅಶಕ್ತರನ್ನಾಗಿಸುತ್ತದೆ.
ತಕ್ಷಣಕ್ಕೆ ಮನೆ ಮದ್ದು ಮಾಡಿಕೊಂಡು ನೋವಿನಿಂದ ಆರಾಮಾಗಬಹುದು. ಅದಕ್ಕೆ ಬೇಕಾದ ಟಿಪ್ಸ್‌ ಅನ್ನು ನಾವು ಹೇಳಿಕೊಡ್ತೇವೆ. ಇದನ್ನ ಮಾಡಿದ್ರೆ ನಿಮ್ಮ ನೋವಿನಿಂದ ಕೊಂಚ ನಿರಾಳವಾಗಬಹುದು. ಮೊದಲಿಗೆ ಮೊದಲಿಗೆ ಉಗುರು ಬೆಚ್ಚಗಿನ ನೀರಿನಿಂದ ಬಾಯನ್ನು ಚನ್ನಾಗಿ ಮುಕ್ಕಳಿಸಬೇಕು. ನಂತರ ಎರಡು ಲವಂಗ ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಬೇಕು. ನಂತರ ಆ ಪುಡಿಯನ್ನು ನೋವಿರುವ ಹಲ್ಲಿನ ಭಾಗಕ್ಕೆ ಲೇಪಿಸಬೇಕು. ಕೆಲವೇ ಕ್ಷಣದಲ್ಲಿ ಹಲ್ಲು ನೋವು ಮಾಯವಾಗುತ್ತದೆ.
ಅದೇ ರೀತಿ ಹಾಗೆ ಪಪ್ಪಾಯ ಹಣ್ಣಿನ ಎಲೆಯ ರಸವನ್ನು ತೆಗೆದು ನೋವಿರುವ ಹಲ್ಲಿನ ಮೇಲೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತೆ. ಪ್ರತಿ ದಿನ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲನ್ನು ಚೆನ್ನಾಗಿ ಉಜ್ಜಬೇಕು. ಅವಕಾಶವಾದಾಗೆಲ್ಲ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುತ್ತಿರಬೇಕು. ಕಬ್ಬನ್ನು ಜಗಿದು ತಿನ್ನುವುದರಿಂದಲೂ ಹಲ್ಲುಗಳು ಸ್ವಚ್ಛವಾಗುತ್ತದೆ. ಇದನ್ನ ನಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಾವು ಆರೋಗ್ಯವಾಗಿರಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!