Monday, August 4, 2025
!-- afp header code starts here -->
Homebig breakingತುಂಬು ಗರ್ಭಿಣಿ ದೀಪಿಕಾ ಪಡುಕೋಣೆ - ಮಾಡರ್ನ್‌ ಗೆಟಪ್‌ನಲ್ಲಿ ಫೋಟೋಶೂಟ್‌…

ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ – ಮಾಡರ್ನ್‌ ಗೆಟಪ್‌ನಲ್ಲಿ ಫೋಟೋಶೂಟ್‌…

ಬೆಂಗಳೂರು : ಬಾಲಿವುಡ್‌ನ ಬ್ಯೂಟಿಫುಲ್‌ ಜೋಡಿಗಳಲ್ಲಿ ರಣ್‌ವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಕಳೆದ ಫೆಬ್ರವರಿಯಲ್ಲಿ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ರು. ಆದಷ್ಟು ಬೇಗ ಮರಿ ದೀಪಿಕಾ ಅಥವಾ ತುಂಟ ರಣ್ವೀರ್ ಬರ್ತಾರೆ ಅಂತ ಅನೌನ್ಸ್‌ ಮಾಡುವ ಮೂಲಕ ತಾನು ತಾಯಿಯಾಗ್ತಿದ್ದೇನೆ ಅನ್ನುವುದನ್ನ ಪ್ರಕಟಿಸಿದ್ರು. ಜತೆಗೆ ಬೇಬಿ ಬಂಪ್‌ ಫೋಟೋಸ್‌ ಅನ್ನೂ ಶೇರ್‌ ಮಾಡಿಕೊಂಡಿದ್ರು.


ಆಗ ತಾನೆ ಗರ್ಭಿಣಿ ಅಂತ ಗೊತ್ತಾಗಿದ್ದು, ಆಗಿನ ಫೋಟೋದಲ್ಲಿ ಗರ್ಭವತಿ ಅನ್ನೋದು ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ನೀವು ನಿಜವಾಗಲೂ ಪ್ರೆಗ್ನೆಂಟಾ ಅಂತ ಅನೇಕರು ಪ್ರಶ್ನಿಸಿದ್ರು. ಇದು ಸುಳ್ಳು ಅಂತ ಒಂದಷ್ಟು ಜನ ಹೇಳಿಕೊಂಡಿದ್ರು. ಅದರೆ ಅದೆಲ್ಲದಕ್ಕೂ ಉತ್ತರ ಎನ್ನುವಂತೆ ಸೆಪ್ಟೆಂಬರ್‌ 2ರಂದು ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್‌ ಸಿಂಗ್‌ black and white ನಲ್ಲಿ ಕೆಲವು ಫೋಟೋಸ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಇನ್ನು ಕೆಲವೇ ದಿನದಲ್ಲಿ ತಾಯಿಯಾಗುತ್ತಿರುವ ಸಂಭ್ರಮವನ್ನು ತನ್ನ ಪತಿ ಜತೆ ಭಿನ್ನ ವಿಭಿನ್ನವಾಗಿ ಫೋಟೋಗೆ ಫೋಸ್‌ ನೀಡಿದ್ದು, ಸದ್ಯ ಈ ಫೋಟೋಗಳು ಟ್ರೆಂಡಿಗ್‌ನಲ್ಲಿವೆ.
ಮಾಡರ್ನ್‌ ಕಾಸ್ಟ್ಯೂಮ್‌ನಲ್ಲಿ ಹೊಟ್ಟೆ ತೋರಿಸಿಕೊಂಡು ಫೋಟೋ ತೆಗೆಸಿಕೊಂಡಿರುವ ಬಗ್ಗೆ ಪ್ಲಸ್‌ & ಮೈನಸ್‌ ಅಭಿಪ್ರಾಯಗಳು ವ್ಯಕ್ತವಾಗಿದೆ. ಅವರ ಪೋಸ್ಟ್‌ಗಳಿಗೆ ಒಂದಷ್ಟು ಮಂದಿ ಪಾಸಿಟಿವ್‌ ಆಗಿ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ನೆಗೆಟಿವ್‌ ಪ್ರತಿಕ್ರಿಯೆಯನ್ನ ನೀಡಿದ್ದಾರೆ.
ದೀಪಿಕಾ ಹಾಗೂ ರಣ್‌ವೀರ್‌ ಸೆಪ್ಟೆಂಬರ್‌ 28 ನೇ ದಿನಾಂಕಕ್ಕೆ ಕಾಯುತ್ತಿದ್ದಾರೆ. ಹೆಣ್ಮಗು ಆಗುತ್ತೋ, ಗಂಡು ಮಗುವಿನ ತಾಯಿಯಾಗ್ತಾರೋ ಎಂಬೆಲ್ಲ ಲೆಕ್ಕಾಚಾರದಲ್ಲಿ ಅಭಿಮಾನಿಗಳೂ ಇದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!