ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಡಿ ಗ್ಯಾಂಗ್ ವಿರುದ್ಧ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ ತನಿಖೆ ನಡೆಸಿರುವ ತನಿಖಾಧಿಕಾರಿ ಎಸಿಪಿ ಚಂದನ್ ಅವರು ಇಂದು ಮುಂಜಾನೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್‌ನ ದಾಖಲಾತಿಗಳನ್ನು ಸಲ್ಲಿಸಿದರು.
3991 ಪುಟಗಳ ಚಾರ್ಜ್ ಶೀಟ್ ಇದಾಗಿದ್ದು, 17 ಆರೋಪಿಗಳ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳು, ಸಿಸಿ ಕ್ಯಾಮರಾ ಫೂಟೇಜ್, ಎಫ್‌ಎಸ್‌ಎಲ್ ವರದಿ ಸೇರಿದಂತೆ ವಿವಿಧ ಆಯಾಮದಲ್ಲಿ ಸಾಕ್ಷಗಳನ್ನು ಒದಗಿಸಲಾಗಿದೆ. ರೇಣುಕಾಸ್ವಾಮಿ ಕೊಲೆಗೆ ಪವಿತ್ರಾಗೌಡನೇ ಮೂಲ ಕಾರಣ ಅನ್ನೋದು ವರದಿ ಉಲ್ಲೇಖವಾಗಿದೆ. ಜತೆಗೆ ಉಳಿದ ಆರೋಪಿಗಳ ಪಾತ್ರ ಏನು ಅನ್ನವ ಬಗ್ಗೆಯೂ ಸಾಕ್ಷ್ಯ ಸಮೇತ ವಿವರಿಸಲಾಗಿದೆ.
ಪ್ರಕರಣದ ತನಿಖೆ ಮುಗಿದಿಲ್ಲ, ಇನ್ನೂ ಬಾಕಿ ಇದೆ ಅನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.


