ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಮೊಬೈಲ್ನಿಂದ ತನಿಖಾ ತಂಡ ಫೋಟೋಗಳನ್ನ ರಿಟ್ರೀವ್ ಮಾಡಿದೆ. ಹಲವು ಫೋಟೋಗಳು ತನಿಖಾ ತಂಡಕ್ಕೆ ಸಿಕ್ಕಿದ್ದು, ಅದರಲ್ಲಿ ಕೆಲವು ಫೋಟೋಗಳು ಹೊರಬಂದಿವೆ.
ಒಂದು ಫೋಟೋದಲ್ಲಿ ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಬನಿಯನ್ನಲ್ಲಿ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದರೆ, ಮತ್ತೊಂದರಲ್ಲಿ ಮೈಯ್ಯೆಲ್ಲಾ ಗಾಯಗಳಾಗಿರುವ ರೇಣುಕಾಸ್ವಾಮಿ ಅಲ್ಲಿದ್ದವರ ಬಳಿ ಕೈಮುಗಿದು ಬೇಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಇವೆರೆಡು ಕೂಡಾ ಪಟ್ಟಣಗೆರೆ ಶೆಡ್ನಲ್ಲಿ ಡಿ ಗ್ಯಾಂಗ್ ಆತನ ಮೇಲೆ ಹಲ್ಲೆ ನಡೆಸಿದ ಸಂದರ್ಭ, ಆತ ಪ್ರಾಣ ಬಿಡುವುದಕ್ಕೂ ಮುನ್ನ ತೆಗೆದ ಫೋಟೋಗಳು.
ಆರೋಪಿ ವಿನಯ್ ಮೊಬೈಲ್ನಲ್ಲಿ ಈ ಫೋಟೋಗಳನ್ನು ತೆಗೆದು ಬಳಿಕ ಡಿಲೀಟ್ ಮಾಡಿದ್ದ. ಡಿಲೀಟ್ ಆದ ಫೋಟೋಗಳನ್ನ FSL ಟೀಂ ರಿಟ್ರೀವ್ ಮಾಡಿದೆ. ಗಾಯಗೊಂಡ ರೇಣುಕಾಸ್ವಾಮಿ ಅಂಗಲಾಚ್ತಿರೋ ಫೋಟೋ ರಿಟ್ರೀವ್ ಬಳಿಕ ಸಿಕ್ಕಿದೆ. ತನ್ನ ಬಿಟ್ಟು ಬಿಡುವಂತೆ ಬೇಡಿಕೊಂಡತೆ ಫೋಟೋ ಕಾಣಿಸಿದೆ. ತಪ್ಪಾಯ್ತು ಎಂದು ಅಳುತ್ತಿರುವ ಮತ್ತು ಮೈಮೇಲೆ ಹಾಕಿದ್ದ ಆತನ ಬನಿಯನ್ ಸಹ ಕಿತ್ತು ಹಾಕಿರುವುದನ್ನು ಫೋಟೋಗಳಲ್ಲಿ ಕಂಡಿವೆ.




