ಮುಂಬೈ : ಬಾಲಿವುಡ್ ನಟಿ ಉರ್ಫಿ ಜಾವೇದ್‌ಳನ್ನ ನೋಡಿ ಅದ್ಯಾರೋ ಹುಡುಗ ಕೆಟ್ಟ ಕಾಮೆಂಟ್ ಮಾಡಿದ್ದಾನೆ. ವಿಷಯ ಅಂದ್ರೆ ಕಾಮೆಂಟ್ ಮಾಡಿದ ಹುಡುಗನಿಗೆ ಕೇವಲ 15 ವರ್ಷ ಅಷ್ಟೇ.
ಉರ್ಫಿ ಜಾವೇದ್ ಬಟ್ಟೆ, ಕ್ರಿಯೇಟಿವ್ ವಿಚಾರದಲ್ಲಿ ಬೋಲ್ಡ್ ಆಗಿದ್ದಾರೆ. ಆದರೆ ಹೆಣ್ಣು ಅನ್ನುವ ವಿಷಯಕ್ಕೆ ಬಂದ್ರೆ ಎಲ್ಲರೂ ಕೂಡ ಸೆನ್ಸಿಬಲ್. ಹಾಗಂತ ಆ ಹುಡುಗ ಕೇಳಿದ ಪ್ರಶ್ನೆಯನ್ನ ಹೇಳಿಕೊಳ್ಳುವುದಿಲ್ಲ ಅನ್ಕೋಬೇಡಿ. ಉರ್ಫಿ ಆ ವಿಷಯವನ್ನು ಬರೆದು ತಮಗಾದ ಅನುಭವನ್ನ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಆ ದಿನ ನಾನು ನನ್ನ ಫ್ಯಾಮಿಲಿ ಜೊತೆಗೆ ಇದ್ದೆ. ಒಂದಷ್ಟು ಫ್ಯಾನ್ಸ್ ಫೋಟೋಗಳನ್ನು ಕೂಡ ತೆಗೆಸಿಕೊಳ್ಳುತ್ತಿದ್ದರು. ಅದ್ಯಾರೋ ಹುಡುಗರ ಗುಂಪು ನನ್ನ ನೋಡಿ ಒಂದು ಕಾಮೆಂಟ್ ಮಾಡಿದ್ರು. ಆ ಕಾಮೆಂಟ್‌ನಿಂದ ನನಗೆ ಬೇಸರ ಆಯಿತು. ಜೊತೆಗೆ ನನ್ನ ಅಮ್ಮನಿಗೂ ಕೂಡ ಬೇಸರ ಆಯಿತು. ಆ ಹುಡುಗ ಹೇಳಿದ ಮಾತು ತುಂಬಾನೆ ನೋವು ತಂದಿದೆ. ಆ ಹುಡುಗ ನನ್ನ ಕೇಳಿದ ಪ್ರಶ್ನೆ ಇಲ್ಲಿವರೆಗೂ ಎಷ್ಟು ಜನರ ಜೊತೆಗೆ ಮಲಗಿದ್ದೀಯಾ ಅಂತ
ಇದರಿಂದ ನನಗೆ ಆ ಕ್ಷಣ ತುಂಬಾನೆ ಮುಜುಗುರ ಆಗಿದೆ. ಪಕ್ಕದಲ್ಲಿ ಅಮ್ಮ ಕೂಡ ಇದ್ದರು. ಚಿಕ್ಕ ಹುಡುಗರೆಲ್ಲ ಹೀಗೆ ಕೇಳ್ತಿದ್ದಾರೆ ಅಂತಲೂ ಬೇಸರ ಪಟ್ಟುಕೊಂಡರು. ಆದರೆ 15 ವರ್ಷದ ಆ ಹುಡುಗನ ಪೋಷಕರ ಬಗ್ಗೆ ಪಾಪ ಅನಿಸುತ್ತದೆ ಅಂತಲೂ ಉರ್ಫಿ ಜಾವೇದ್ ಹೇಳಿಕೊಂಡಿದ್ದಾರೆ.
ಉರ್ಫಿ ಜಾವೇದ್ ಬಟ್ಟೆ ವಿಚಾರದಲ್ಲಿ ಎಷ್ಟು ಬೋಲ್ಡ್ ಆಗಿದ್ದಾರೊ ಇಂತಹ ವಿಚಾರಗಳನ್ನು ಶೇರ್ ಮಾಡಿಕೊಳ್ಳುವುದರಲ್ಲೂ ಬೋಲ್ಡ್ ಆಗಿದ್ದಾರೆ.


