ಬೆಂಗಳೂರು : ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಪಕ್ಷದ ಹಿರಿಯರು ಬೇಡಿಕೆಯಿಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ʼರಾಜ್ಯದಲ್ಲಿ ಸಿಎಂ ಕುರ್ಚಿನೇ ಖಾಲಿ ಇಲ್ಲ, ಇನ್ಯಾಕೆ ಸಿಎಂ ಸ್ಥಾನ ಕೇಳ್ತಾರೆ ಅಂತʼ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಸ್ಥಾನದ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ. ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಯಾರಿಗೂ ಯಾವ ಅನುಮಾನವಿಲ್ಲ. ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಕುರ್ಚಿನೇ ಖಾಲಿ ಇಲ್ಲ, ಇನ್ಯಾಕೆ ಸಿಎಂ ಸ್ಥಾನ ಕೇಳ್ತಾರೆ..!? – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ..!
RELATED ARTICLES