ಶಿವಮೊಗ್ಗ : ಗಣಪತಿ ಮೆರವಣಿಗೆ ಸಂದರ್ಭ ಮುಸಲ್ಮಾನರು ಮೂರ್ತಿಗೆ ಮಾಲಾರ್ಪಣೆ ಮಾಡಿ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾದ ಬೆಳವಣಿಗೆ ಇಮಾಮ್ ಬಡ ಏರಿಯಾದಲ್ಲಿ ನಡೆದಿದೆ.
ಸ್ನೇಹ ಜ್ಯೋತಿ ಗೆಳೆಯರ ಬಳಗದ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿತ್ತು. ವಿಸರ್ಜನಾ ಮೆರವಣಿಗೆ ಮಸೀದಿ ಬಳಿ ಸಾಗುತ್ತಿದ್ದಾಗ ಮಸೀದಿ ಅಧ್ಯಕ್ಷ ಮುನೀರ್ ಅಹ್ಮದ್ ಹಾಗೂ ಇತರರು ಬೃಹತ್ ಹಾರವನ್ನು ವಾಹನದಲ್ಲಿದ್ದ ಗಣೇಶನ ಮೂರ್ತಿಗೆ ಹಾಕಿದರು. ಮಾತ್ರವಲ್ಲ ಉತ್ಸವ ಮೆರಣಿಗೆಯಲ್ಲೂ ಪಾಲ್ಗೊಂಡು ಸಂಭ್ರಮಿಸಿದರು.
ಮಂಡ್ಯದಲ್ಲಿ ಮಸೀದಿ ಬಳಿ ಮೆರವಣಿಗೆ ಸಾಗಿದಾಗ ತಗಾದೆ ತೆಗೆದು ಗಲಾಟೆ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಈ ನಡುವೆ ಶಿವಮೊಗ್ಗದ ಮಸೀದಿ ಬಳಿ ಮೆರವಣಿಗೆ ಸಾಗಿದಾಗ ಹೂವಿನ ಹಾರ ಹಾಕಿ ಸಾಮರಸ್ಯ ಮೆರೆದ ಮುಸ್ಲೀಮರ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





