ಶಿವಮೊಗ್ಗ: ಗಣೇಶ ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ವಿದೇಶಿಗರು ಕುಣಿದು ಕುಪ್ಪಳಿಸಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಹೋಬಳಿಯ ಗಿಣಿವಾರ ಗ್ರಾಮದಲ್ಲಿ ನಡೆದಿದೆ.
ಗಿಣಿವಾರ ಗ್ರಾಮದಲ್ಲಿ ಗಣೇಶ ಮೆರವಣಿಗೆ ಸಂಭ್ರಮಾಚರಣೆಯಲ್ಲಿ ಗ್ರಾಮಸ್ಥರೆಲ್ಲ ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಇದೆ ವೇಳೆಗೆ ವಿದೇಶದಿಂದ ಶಿವಮೊಗ್ಗ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರು ಕೂಡ ಡಿಜೆಗೆ ಮರುಳಾಗಿ ಕರಿಮಣಿ ಮಾಲೀಕ ನೀನಲ್ಲ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ.
ಮೆರವಣಿಗೆ ವೇಳೆ ಸ್ಥಳೀಯರ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ವಿದೇಶಿ ಪ್ರಜೆಗಳ ಈ ಕುಣಿತ ಎಲ್ಲೆಡೆ ವೈರಲ್ ಆಗಿದೆ.





