ಬೆಂಗಳೂರು : ರಾಜ್ಯ ಸರ್ಕಾರ ಕೆಲವು ತಿಂಗಳ ಹಿಂದಷ್ಟೇ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಕ್ಷೀರ ದರ ಹೆಚ್ಚಳ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣವಾಗಿವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಹಾಲಿಗೆ 3 ರೂ ಹೆಚ್ಚು ಮಾಡಿದ್ರೆ ಬೆಲೆ ಏರಿಸಿದ್ರು ಅಂತಾ ಬಿಜೆಪಿಯವ್ರು ಜೋರಾಗಿ ಹೇಳ್ತಾರೆ. ದರ ಹೆಚ್ಚಿಸದಿದ್ರೆ ಹಾಲು ಉತ್ಪಾದಿಸುವ ರೈತರಿಗೆ ಹಣ ಕೊಡ್ಬೇಕಲ್ವಾ ಅಂತ ಪ್ರಶ್ನಿಸಿದರು. ಹೆಚ್ಚು ಮಾಡಿದ ತಕ್ಷಣ ಬಿಜೆಪಿಯವ್ರು ಬಾಯಿ ಬಡ್ಕೊಳ್ತಾರೆ. ಹಸು, ಎಮ್ಮೆ ಸಾಕೋದು ಕಷ್ಟ ಇದೆ ಅಂತ ನೀವು ಹೇಳ್ಬೇಕು. ನೀವು ಜತೆಗಿದ್ದರೆ 5 ರೂಪಾಯಿ ಹೆಚ್ಚು ಮಾಡೋದು ನಮಗೆ ಕಷ್ಟ ಇಲ್ಲ ಅಂತ ಹೇಳಿದ್ರು. ಈ ವೇಳೆ ಹೆಚ್ಚು ಮಾಡಿ ಹೆಚ್ಚು ಮಾಡಿ ಅಂತ ಕಾರ್ಯಕರ್ತರು ದನಿಗೂಡಿಸಿದರು.
ನಮ್ಮ ಕಾರ್ಯಕರ್ತರು ಮಾತನಾಡುವುದನ್ನು ಕಲಿಯಬೇಕು. ಬಿಜೆಪಿಯವರು ಸುಳ್ಳನ್ನೇ ಸತ್ಯ ಅಂತ ಬಿಂಬಿಸುತ್ತಾರೆ. ನಮ್ಮವರು ಸುಳ್ಳು ಹೇಳೋದು ಬೇಡ. ಇರುವ ವಿಚಾರವನ್ನು ಜನರಿಗೆ ತಲುಪಿಸಿದರೆ ಸಾಕು ಅಂತ ಹೇಳಿದ್ರು. ರೈತರ ಮಕ್ಕಳು ಅಂತ ಹೇಳುವವರು ರೈತರಿಗೆ ಏನೂ ಮಾಡಿಲ್ಲ. ನಾವು ಕುರಿ ಕಾಯುವವರ ಮಕ್ಕಳು, ಎಮ್ಮೆ ಕಾಯುವವರ ಮಕ್ಕಳು. ನಾವು ರೈತರಿಗಾಗಿ ಕಾರ್ಯಕ್ರಮ ಮಾಡುತ್ತೇವೆ ಅಂತ ತಿಳಿಸಿದ್ರು.
