ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎದುರು – ಬದುರು ಮನೆಯ ನಿವಾಸಿಗಳಿಬ್ಬರು ನಿನ್ನೆ ಒಂದೇ ದಿನ ನಿಧನರಾಗಿದ್ದಾರೆ.
ಅಬ್ದುಲ್ ರಹಮಾನ್ ಮೇಸ್ತ್ರಿ(54) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರ ಅಂತಿಮ ದರ್ಶನ ಮಾಡಿ ಮರಳಿದ್ದ ಎದುರು ಮನೆಯ ಹನೀಫ್ ಸಾಹೇಬ್(65) ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಬ್ದುಲ್ ರಹಮಾನ್ ಮೇಸ್ತ್ರಿ ಮೂಲತಃ ವಿಟ್ಲ ಬಳಿಯ ಒಕ್ಕೆತ್ತೂರು – ಕೊಡಂಗೆ ನಿವಾಸಿಯಾಗಿದ್ದು, ಇತ್ತೀಚೆಗೆ ಭಗವಂತಕೋಡಿಯಲ್ಲಿ ಮನೆ ಖರೀದಿಸಿ ವಾಸವಾಗಿದ್ದರು.
ಕೆಲವೇ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದ ಎದುರು-ಬದುರು ಮನೆ ನಿವಾಸಿಗಳು..!
RELATED ARTICLES