Wednesday, October 14, 2026
Homeಜಿಲ್ಲಾಸುದ್ದಿಉಪಚುನಾವಣೆ : ಒಂದೆಡೆ ರೆಡ್ಡಿ ಆಪ್ತ, ಮತ್ತೊಂದೆಡೆಗೆ ಬೊಮ್ಮಾಯಿ ಪುತ್ರನಿಗೆ ಬಿಜೆಪಿ ಟಿಕೆಟ್‌ ಘೋಷಣೆ..!

ಉಪಚುನಾವಣೆ : ಒಂದೆಡೆ ರೆಡ್ಡಿ ಆಪ್ತ, ಮತ್ತೊಂದೆಡೆಗೆ ಬೊಮ್ಮಾಯಿ ಪುತ್ರನಿಗೆ ಬಿಜೆಪಿ ಟಿಕೆಟ್‌ ಘೋಷಣೆ..!

Telegram Group
Join Now

ಬೆಂಗಳೂರು : ಪ್ರತಿಷ್ಠೆಯ ಕಣವಾಗಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಎರಡು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಶಿಗ್ಗಾಂವಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಟಿಕೆಟ್‌ ಸಿಕ್ಕಿದ್ದರೆ, ಸಂಡೂರು ಕ್ಷೇತ್ರಕ್ಕೆ ಭರತ್‌ ಬೊಮ್ಮಾಯಿಗೆ ಬಿಜೆಪಿ ವರಿಷ್ಟರು ಕೃಪೆ ತೋರಿದ್ದಾರೆ.
ಬೊಮ್ಮಾಯಿ ಪುತ್ರನಿಗೆ ಟಿಕೆಟ್‌ ನೀಡಬೇಕು, ಬೇಡ ಎಂಬ ವಿಚಾರವಾಗಿ ಸಾಕಷ್ಟು ಪರ ವಿರೋಧ ವ್ಯಕ್ತವಾಗಿತ್ತು. ವಿರೋದಕ್ಕೆ ತಲೆಕೆಡಿಸಿಕೊಳ್ಳದ ನಾಯಕರು ಮಾಜಿ ಮುಖ್ಯಮಂತ್ರಿಯ ಮಗನಿಗೆ ಅದೃಷ್ಟ ಪರೀಕ್ಷೆಯ ಸವಾಲು ನೀಡಿದ್ದಾರೆ. ಮತ್ತೊಂದೆಡೆ ಶಿಗ್ಗಾಂವಿಗೆ ಜನಾರ್ದನ ರೆಡ್ಡಿ ಆಪ್ತ, ಬಿಜೆಪಿ ಎಸ್‌ಟಿ ಮೋರ್ಚಾ ನಾಯಕ ಬಂಗಾರು ಹನುಮಂತುಗೆ ಟಿಕೆಟ್‌ ನೀಡಲಾಗಿದೆ. ಆದರೆ ಚನ್ನಪಟ್ಟಣದ ಅಭ್ಯರ್ಥಿ ಯಾರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಎರಡು ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಟಿಕೆಟ್‌ ಸಿಕ್ಕಿರುವುದರಿಂದ ಚನ್ನಪಟ್ಟಣದ ಟಿಕೆಟ್‌ ಜೆಡಿಎಸ್‌ ಪಾಲಾಗುವುದು ಬಹುತೇಕ ಫಿಕ್ಸ್‌ ಆದಂತಾಗಿದೆ. ಜೆಡಿಎಸ್‌ನಿಂದ ಹೆಚ್‌ಡಿಕೆ ಪುತ್ರ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!