Friday, March 27, 2026
Homebig breakingತಿರುಪತಿಯಲ್ಲಿ ಕಾಲ್ತುಳಿತ - ಮೃತರ ಸಂಖ್ಯೆ 06ಕ್ಕೆ ಏರಿಕೆ - ಗಾಯಾಳುಗಳ ಏರ್‌ಲಿಫ್ಟ್‌ಗೆ ನಾಯ್ಡು ಸೂಚನೆ

ತಿರುಪತಿಯಲ್ಲಿ ಕಾಲ್ತುಳಿತ – ಮೃತರ ಸಂಖ್ಯೆ 06ಕ್ಕೆ ಏರಿಕೆ – ಗಾಯಾಳುಗಳ ಏರ್‌ಲಿಫ್ಟ್‌ಗೆ ನಾಯ್ಡು ಸೂಚನೆ

ತಿರುಪತಿ : ಆಂಧ್ರಪ್ರದೇಶದ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ ಮೃತರ ಸಂಖ್ಯೆ 06ಕ್ಕೆ ಏರಿಕೆಯಾಗಿದೆ.
ನಿನ್ನೆ ರಾತ್ರಿ ವೇಳೆ ವೈಕುಂಠ ಏಕಾದಶಿಯ ಟಿಕೆಟ್‌ ಪಡೆಯುವ ವಿಚಾರದಲ್ಲಿ ವಿಷ್ಣು ನಿವಾಸ ಕಟ್ಟಡ ಬಳಿ ಏಕಾಏಕಿ ಸಾವಿರಾರು ಭಕ್ತರು ಮುಗಿಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿತ್ತು. ನಿನ್ನೆ ರಾತ್ರಿಯ ಮಾಹಿತಿಯಂತೆ 04 ಮಂದಿ ಕೊನೆಯುಸಿರೆಳೆದಿದ್ದರು. ಗುರುವಾರ ಬೆಳಗ್ಗೆ ಸಿಕ್ಕ ಮಾಹಿತಿ ಪ್ರಕಾರ ಮೃತರಾದವರ ಸಂಖ್ಯೆ 06ಕ್ಕೆ ಹೆಚ್ಚಳವಾಗಿದೆ.
ಸ್ಥಳಕ್ಕೆ ಚಂದ್ರಬಾಬು ನಾಯ್ಡು ಭೇಟಿ : ತಿಮ್ಮಪ್ಪನ ಸನ್ನಿಧಿಯಲ್ಲಿ ಸಂಭವಿಸಿದ ದುರಂತಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ದಿಗ್ಭ್ರಮೆ ವ್ಯಕಗತಪಡಿಸಿದ್ದಾರೆ. ಇಂದು ಘಟನೆ ನಡೆದ ಸ್ಥಳ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವಾನ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಏರ್‌ಲಿಫ್ಟ್‌ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!