Friday, March 27, 2026
Homebig breakingಕ್ಷುಲ್ಲಕ ಕಾರಣಕ್ಕೆ ಕಲಹ - ಬಾಮೈದನನ್ನೇ ಹತ್ಯೆಗೈದ ಬಾವ..!

ಕ್ಷುಲ್ಲಕ ಕಾರಣಕ್ಕೆ ಕಲಹ – ಬಾಮೈದನನ್ನೇ ಹತ್ಯೆಗೈದ ಬಾವ..!

ವೀರಾಜಪೇಟೆ : ಕ್ಷುಲ್ಲಕ ಕಾರಣಕ್ಕೆ ನಡೆದ ಲಹದಲ್ಲಿ ಬಾವನೇ ಬಾಮೈದನನ್ನು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.
ಮಂಜು(22) ಕೊಲೆಯಾದ ದುರ್ದೈವಿ. ಬಾವ ಅಭಿ(24) ಕೊಲೆ ಮಾಡಿದ ಆರೋಪಿ. ಕೆದಮಳ್ಳೂರು ಗ್ರಾಮದ ಅಚ್ಚಯ್ಯ ಎಂಬವರ ತೋಟದ ಲೈನ್‌ಮನೆಯಲ್ಲಿ ಈ ಕುಟುಂಬ ವಾಸವಿತ್ತು. ಕಾಫಿ ಕಣದಲ್ಲಿ ಕಾಫಿ ಒಣಗಲು ಹಾಕಲಾಗಿತ್ತು. ಮೊನ್ನೆ ರಾತ್ರಿ ವೇಳೆ ಕಾವಲಿಗೆ ತೆರಳಿದ್ದ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಅದು ತಾರಕಕ್ಕೇರಿ ಅದು ಕೊಲೆಯಲ್ಲಿ ಕೊನೆಯಾಗಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಭಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!