ಮಡಿಕೇರಿ : ಬಹುಭಾಷಾ ನಟಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಕಳೆದ ವರ್ಷ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಅಷ್ಟಾಗಿ ಹೊರಗಡೆ ಕಾಣಿಸಿಕೊಂಡಿರಲಿಲ್ಲ.
ತಾಯ್ತನದ ಸಂಭ್ರಮದಲ್ಲಿರುವ ಹರ್ಷಿಕಾ ಹಾಗೂ ಕುಟುಂಬ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದಾರೆ. 2025 ಆರಂಭದಲ್ಲೇ ದೇಗುಲ ದರ್ಶನ ಮಾಡಿದ್ದು, ಮಗುವಿನ ಏಳಿಗೆಗಾಗಿ ದೇವಿಯ ಎದುರು ಪ್ರಾರ್ಥಿಸಿದ್ದಾರೆ. ಪತಿ, ನಟ ಉಳ್ಳಿಯಡ ಭುವನ್ ಪೊನ್ನಣ್ಣ, ಭುವನ್ ತಂದೆ ಉಳ್ಳಿಯಡ ಪೂವಯ್ಯ, ತಾಯಿ ಡಾಟಿ ಪೂವಯ್ಯ ಸೇರಿದಂತೆ ಕುಟುಂಬ ಸದಸ್ಯರು ಈ ಸಂದರ್ಭ ಇದ್ದರು.

