Friday, March 27, 2026
Homebig breaking1 ಕೋಟಿ ರೂ. ಅಧಿಕ ಮೌಲ್ಯದ ಅಡಿಕೆ ಕದ್ದ ಖತರ್ನಾಕ್‌ ಚೋರರು - ದುಬೈಗೆ ಹಾರೋದಕ್ಕೂ...

1 ಕೋಟಿ ರೂ. ಅಧಿಕ ಮೌಲ್ಯದ ಅಡಿಕೆ ಕದ್ದ ಖತರ್ನಾಕ್‌ ಚೋರರು – ದುಬೈಗೆ ಹಾರೋದಕ್ಕೂ ಮುನ್ನ ಲಾಕ್‌ ಮಾಡಿದ ಕಾಫಿನಾಡಿನ ಪೊಲೀಸರು..!

ಚಿಕ್ಕಮಗಳೂರು : 1 ಕೋಟಿ ರೂ. ಅಧಿಕ ಮೌಲ್ಯದ ಅಡಿಕೆ ಕದ್ದಿದ್ದ ಖತರ್ನಾಕ್ ಕಳ್ಳರನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಸಾದಿಕ್, ಸುಭಾನ್, ಗೌಸ್, ಫಯಾಜ್, ಹಮ್ಜಾ ಬಂಧಿತ ಅಡಿಕೆ ಕಳ್ಳರು.
ಚಿಕ್ಕಮಗಳೂರಿನ ಕಡೂರಿನಿಂದ ಗುಜರಾತ್‌ಗೆ ತೆರಳಬೇಕಿದ್ದ ಲಾರಿಯನ್ನು ಬೇರೆಡೆ ಕೊಂಡೊಯ್ದು ಕಳ್ಳತನ ಮಾಡಿದ್ದ ಖತರ್ನಾಕ್‌ ಚೋರರು. ಬಾಲಾಜಿ ರೋಡ್‌ವೇಸ್‌ನ ದುಲಾರಾಮ್‌ ಎಂಬವರಿಗೆ ಸೇರಿದ ಲಾರಿಯಲ್ಲಿ ೩೩೫ ಚೀಲ ಅಡಿಕೆ ಲೋಡ್‌ ಮಾಡಿ ಸಾಗಿಸಲಾಗುತ್ತಿತ್ತು. ಈ ವೇಳೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಲಾರಿ ಕೊಂಡೊಯ್ದಿದ್ದರು. ಈ ಬಗ್ಗೆ ಬೀರೂರು ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ ತನಿಖೆ ಕೈಗೊಂಡ ಚಿಕ್ಕಮಗಳೂರು ಪೊಲೀಸರು ಚಾಲಾಕಿ ಚೋರರನ್ನ ಖೆಡ್ಡಾಗೆ ಬೀಳಿಸಿದ್ದಾರೆ.
335 ಅಡಿಕೆ ಚೀಲ ವಶಪಡಿಸಿಕೊಂಡಿದ್ದು, ಜೊತೆಗೆ ಲಾರಿ, 2 ಲಕ್ಷದ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಸಾದಿಕ್, ಸುಭಾನ್, ಗೌಸ್, ಫಯಾಜ್, ಹಮ್ಜಾ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಕದ್ದ ಅಡಿಕೆಯನ್ನು ಮಾರಾಟ ಮಾಡಿ ದುಬೈಗೆ ಹಾರೋದಕ್ಕೆ ಆರೋಪಿಗಳು ಪ್ಲಾನ್‌ ಹಾಕಿಕೊಂಡಿದ್ದರು ಎಂಬ ವಿಚಾರ ತಿಳಿದುಬಂದಿದೆ. ಆದರೆ ಪೊಲೀಸರ ಚುರುಕಿನ ಕಾರ್ಯಾಚರಣೆ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಎಸ್ಪಿ ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ರಫೀಕ್, ಬೀರೂರು ಠಾಣೆ ಪಿಎಸ್‌ಐ ಸಜಿತ್ ಕುಮಾರ್, ಅಜ್ಜಂಪುರ ಠಾಣೆಯ ಪಿಎಸ್‌ಐ ತಿಪ್ಪೇಶ್, ಲಿಂಗದಹಳ್ಳಿ ಪಿಎಸ್‌ಐ ಶಶಿಕುಮಾರ್, ಬೀರೂರು ಠಾಣೆಯ ತನಿಖೆ ವಿಭಾಗದ ಪಿಎಸ್‌ಐ ಗಣಪತಿ ಶೇರುಗಾರು ಸೇರಿದಂತೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!