Friday, March 27, 2026
Homebig breakingಡಿಕ್ಕಿಯಾದ ಬೈಕ್‌ ಅನ್ನು 60 ಮೀಟರ್‌ ಎಳೆದೊಯ್ದ ಕಾರು ಚಾಲಕ - ಡೆಡ್ಲಿ ಆಕ್ಸಿಡೆಂಟ್‌ಗೆ ಬೆಚ್ಚಿದ...

ಡಿಕ್ಕಿಯಾದ ಬೈಕ್‌ ಅನ್ನು 60 ಮೀಟರ್‌ ಎಳೆದೊಯ್ದ ಕಾರು ಚಾಲಕ – ಡೆಡ್ಲಿ ಆಕ್ಸಿಡೆಂಟ್‌ಗೆ ಬೆಚ್ಚಿದ ಚಿಕ್ಕಮಗಳೂರು..!

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದಲ್ಲಿ ಜನಸಮೂಹ ಬೆಚ್ಚಿಬೀಳುವಂಥ ಅಪಘಾತವೊಂದು ಸಂಭವಿಸಿದೆ. ಕಾರು ಮತ್ತು ಬೈಕ್​ ನಡುವೆ ನಡೆದ ಭೀಕರ ಅಪಘಾತದ ದೃಶ್ಯ ಎಂಥವರ ಎದೆಯನ್ನು ಒಂದು ಕ್ಷಣ ನಡುಗಿಸಿಬಿಡುತ್ತೆ. ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ.
ಬೈಕ್‌ ಮತ್ತು ಕಾರು ಡಿಕ್ಕಿಯಾಗಿದ್ದು, ಕಾರಿನ ಎದುರು ಭಾಗಕ್ಕೆ ಡಿಕ್ಕಿಯಾದ ಬೈಕ್‌ ಅನ್ನು 60 ಮೀಟರ್‌ಗೂ ಅಧಿಕ ದೂರ ಎಳೆದೊಯ್ದಿರುವ ದೃಶ್ಯ ಬೆಚ್ಚಿಬೀಳುವಂತಿದೆ. ಬೈಕ್ ಅನ್ನು ಎಳೆದೊಯ್ದ ರಭಸಕ್ಕೆ ಬೆಂಕಿಯ ಕಿಡಿ ಉದ್ದಕ್ಕೂ ವ್ಯಾಪಿಸಿದೆ. ನಗರದ ಕುರುವಂಗಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬೈಕ್‌ ಸವಾರ ರಾಜಶೇಖರ್ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಬಳಿಕ ಕಾರು ನಿಲ್ಲಿಸದೇ ಹೋದ ಜೆನ್ ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದಿಂದ ರಾಜಶೇಖರ್‌ ಅವರ ಸೊಂಟದ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!